ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಇವರುಗಳ ಮಾರ್ಗದರ್ಶನದಲ್ಲಿ ದೆಹಲಿಯ ಕರ್ತವ್ಯ ಪಥದಲ್ಲಿ ನಿರ್ಮಾಣವಾಗುತ್ತಿರುವ ಅಮೃತ ವಾಟಿಕಾ ವನಕ್ಕೆ ನೆಲದ ಮಣ್ಣು ಕಳಿಸುವ “ನನ್ನ ಮಣ್ಣು – ನನ್ನ ದೇಶ” ಅಭಿಯಾನಕ್ಕೆ ಜಿಲ್ಲಾ, ರಾಜ್ಯ ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಫೋರ್ಟ್ಸ್ ಕ್ಲಬ್ (ರಿ) ತೋಕೂರು, ಹಳೆಯಂಗಡಿ ಇದರ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.


ದೇಶ ಪ್ರೇಮದ ಜಾಗೃತಿ ಸದಾ ನಮ್ಮಲ್ಲಿರಬೇಕು , ಸೈನಿಕರ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಕಾರ್ಯದಲ್ಲಿ ಯುವ ಜನತೆಯು ತೊಡಗಿಸಿಕೊಳ್ಳಬೇಕು ,ದೇಶದ ಮಣ್ಣಿನ ಸತ್ಯದ ಅರಿವು ಎಲ್ಲರ ಮನದಲ್ಲಿ ಮೂಡಬೇಕು ಎಂದು ಕ್ಲಬ್ ನ ಹಿರಿಯ ಸದಸ್ಯ ಹಾಗೂ ಸಮಾಜ ಸೇವಕ ಶ್ರೀ ಮಹೇಶ್ ಸುವರ್ಣ “ನನ್ನ ಮಣ್ಣು- ನನ್ನ ದೇಶ” ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಅಭಿಯಾನದಲ್ಲಿ ಸ್ಫೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಜಗದೀಶ್ ಕುಲಾಲ್, ಉಪಾಧ್ಯಕ್ಷರಾದ ಸುನಿಲ್ ದೇವಾಡಿಗ, ಕಾರ್ಯಾಧ್ಯಕ್ಷರಾದ ಸಂತೋಷ್ ದೇವಾಡಿಗ, ನಿಕಟ ಪೂರ್ವ ಕಾರ್ಯಾಧ್ಯಕ್ಷರಾದ ಸುರೇಶ್ ಶೆಟ್ಟಿ, ಪರಿಸರ ಸಂರಕ್ಷಣಾ ಕಾರ್ಯದರ್ಶಿ ಸಂಪತ್ ದೇವಾಡಿಗ,ಲೆಕ್ಕ ಪರಿಶೋಧಕ ಸುಭಾಸ್ ಅಮೀನ್, ಕ್ರೀಡಾ ಕಾರ್ಯದರ್ಶಿ ಯೂನುಸ್, ಹಾಗೂ ಗಣೇಶ್ ದೇವಾಡಿಗ, ಹಿಮಕರ್ ಕೋಟ್ಯಾನ್ , ಮಹೇಶ್ ಸುವರ್ಣ, ಸಚಿನ್ ಆಚಾರ್ಯ ಮತ್ತು ಮತ್ತಿತರರು ಪಾಲ್ಗೊಂಡರು.










