ಬಂಟ್ವಾಳಃ ಪಾಣೆಮಂಗಳೂರು ಶ್ರೀ ಭಯಂಕೇಶ್ವರ ದೇವಳದಲ್ಲಿ ಅ. 26ರಂದು ನಡೆಸಲು ಉದ್ದೇಶಿಸಿರುವ ಪ್ರಶ್ನಾ ಚಿಂತನೆ ಪೂರ್ವಭಾವಿ ಸಭೆಯು ಶ್ರೀ ಕ್ಷೇತ್ರದಲ್ಲಿ ಅ.1 ರಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಸೋಮಯಾಜಿ ನೇತೃತ್ವದಲ್ಲಿ ನಡೆಯಿತು.
ಅವರು ಮಾತಾಡಿ ಕ್ಷೇತ್ರದ ತಂತ್ರಿ ಗಳಾದ ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ,
ಪ್ರಸಿದ್ದ ದೈವಜ್ಞರಾದ ಬೇಲ ಪದ್ಮನಾಭ ಶರ್ಮ ಅವರು ಪ್ರಶ್ನಾ ಚಿಂತನೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡುವರು ಎಂದು ತಿಳಿಸಿದರು.
ಪ್ರಶ್ನಾ ಚಿಂತನೆಗೆ ಧನಾತ್ಮಕವಾಗಿ ಸ್ಪಂದನೆ ನೀಡಿ ಅದರ ಸದುಪಯೋಗವನ್ನು
ಕ್ಷೇತ್ರದ ಸಾನಿಧ್ಯ ಅಭಿವೃದ್ದಿಗಾಗಿ ಬಳಸಿಕೊಳ್ಳಬೇಕು ಎಂದರು. ಕ್ಷೇತ್ರಕ್ಕೆ ನಿತ್ಯವು ಭಕ್ತಾಧಿಗಳ ಸಂಪರ್ಕ ಹೆಚ್ಚಾಗಬೇಕು ಅದಕ್ಕಾಗಿ ಸೌಕರ್ಯ ಅಳವಡಿಸುವುದು. ನಿತ್ಯ ಭಜನಾ ಸಂಕೀರ್ತನೆ ನಡೆಸುವ ಬಗ್ಗೆ ತಿಳಿಸಿದರು.
ವೇದಿಕೆಯಿಂದ ವೈದಿಕರಾದ ವೆಂಕಟರಮಣ ಮುಚ್ಚಿನ್ನಾಯ, ಕೇಶವ ಶಾಂತಿ, ಪ್ರಮುಖರಾದ ರಾಜಾ ಬಂಟ್ವಾಳ್, ಜಗನ್ನಾಥ ಬಂಗೇರ ನಿರ್ಮಾಲ್, ಸಮಿತಿ ಸದಸ್ಯರಾದ ಲೊಕೇಶ್ ನರಹರಿನಗರ ಮಾತನಾಡಿದರು.
ಗುತ್ತು ಮನೆಯ ಕೇಶವ ಶೆಣೈ, ರವಿ ಶೆಣೈ, ಐದು ಮನೆ ಮುಖ್ಯಸ್ಥರಾದ ಹೊಸಲಚ್ಚಿಲು ಯತೀಶ್ ಶೆಟ್ಟಿ, ಕೆದ್ದೇಲು ರಂಜಿತ್, ಕೋಡಿ ಕೇಶವ ಪೂಜಾರಿ, ಪಲ್ಲತಿಲ ಜಯರಾಜ್,
ನಿರ್ಮಾಲ್ ರಾಜೇಶ್ , ಗಣ್ಯರಾದ ರಘು ಸಪಲ್ಯ, ಪ್ರೇಮನಾಥ ಶೆಟ್ಟಿ , ವೇದವ ಗಾಣಿಗ, ಉಲ್ಲಾಸ್ ರೈ ಸೂರಿಕುಮೇರ್, ಪುರುಷೋತ್ತಮ ಬಂಗೇರ ನಾಟಿ ಮತ್ತು ಇತರ ನೇತಾರರು ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿಯ ಕೃಷ್ಣಪ್ಪ ಗಾಣಿಗ ಸ್ವಾಗತಿಸಿ ವಂದಿಸಿದರು. ಮೆನೇಜರ್ ನಾಗೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…