ಕರಾವಳಿ

ತುಳುವೆರೆ ಆಯಾನೊ ಕೂಟ ಕುಡ್ಲ ವತಿಯಿಂದ ನೂತನ ಪದಗ್ರಹಣ, ಗೌರವ ಪ್ರಧಾನ, ತುಳು ದೇವಿ ಮಹಾತ್ಮೆ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನ

ಮಂಗಳೂರು : ತುಳು ಭಾಷೆಯಲ್ಲಿ ವಿವಿಧ ತರವಾದ ಪ್ರಾದೇಶಿಕ ಬದಲಾವಣೆಗಳಿವೆ,  ಅಲ್ಲದೆ ಜಾತಿಯ ಬದಲಾವಣೆಗಳಿವೆ ಇದೆಲ್ಲವೂ ತುಳುನಾಡಿನ ತುಳು ಭಾಷೆಯ ವಿಶಿಷ್ಟತೆಯನ್ನು ಸಾರುತ್ತದೆ.  ದಾನ ಧರ್ಮದ ಕೆಲಸದಲ್ಲಿ ನನ್ನ ಮನೆಯವರ ಸಹಕಾರ ಮತ್ತು ಶ್ರದ್ಧೆ ಇನ್ನಷ್ಟು ಉತ್ತೇಜಿಸಿದೆ . ನನ್ನಲ್ಲಿ ನನ್ನ ಧರ್ಮಪತ್ನಿ ಮಕ್ಕಳು ಯಾವುದೇ ಪ್ರೀತಿಯ ಆಕ್ಷೇಪಗಳನ್ನು ನೀಡದಿರುವುದೇ ಈ ರೀತಿಯ ಕೆಲಸ ಕಾರ್ಯಗಳ ಪ್ರೋತ್ಸಾಹ ಎಂದು ತುಳುವೆರೆ ಕರ್ಣೆ  ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು.

ಮಂಗಳೂರು ಪುರ ಭವನದಲ್ಲಿ ನಡೆದ ತುಳುವೆರೆ ಆಯನೊ ಕೂಟ ಕುಡ್ಲ ಇದರ ಪದಗ್ರಹಣ ಸಮಾರಂಭದಲ್ಲಿ ತುಳುವೆರೆ ಕರ್ಣೆ  ಬಿರುದು ಸ್ವೀಕರಿಸಿ ಸದಾಶಿವ ಶೆಟ್ಟಿ ಕನ್ಯಾನ   ಮಾತನಾಡಿದರು. 

ಕಾರ್ಯಕ್ರಮವನ್ನು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಹರಿನಾರಾಯಣ ಅಸ್ರಣ್ಣರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕರ್ನಾಟಕ ಮಾಜಿ ಸಚಿವರಾದ ರಮನಾಥ ರೈ, ವಿಶ್ವ ಬಂಟರ ಕೂಟಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಮಹಾನಗರ ಪಾಲಿಕೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ವರುಣ್ ಚೌಟ,  ನ್ಯಾಯವಾದಿ, ನೋಟರಿ ಪದ್ಮರಾಜ್, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ ಭಂಡಾರಿ, ದಯಾನಂದ ಕತ್ತಲಸಾರ್, ಯೋಗೀಶ್ ಶೆಟ್ಟಿ ಜಪ್ಪು, ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಮೊದಲಾದವರು ಉಪಸ್ಥಿತರಿದ್ದರು.

ಖ್ಯಾತ ಸಂಗೀತ ನಿರ್ದೇಶಕ ಪ್ರಮೋದ ಸಪ್ರೆ ಮತ್ತು ಬಳಗದವರು ತುಳುನಾಡ ಗೀತೆ ಹಾಡಿದರು. ನವೀನ್ ಶೆಟ್ಟಿ ಎಡ್ಮೇಮಾರುರವರು ಕಾರ್ಯಕ್ರಮ ನಿರೂಪಿಸಿದರು. ಪದಗ್ರಹಣ ಸಮಾರಂಭದಲ್ಲಿ ಗೌರವಾಧ್ಯಕ್ಷರಾಗಿ  ಮನೋಹರ್ ಶೆಟ್ಟಿ ಸಾಯಿ ರಾಧ ಗ್ರೂಪ್ ಆಡಳಿತ ನಿರ್ದೇಶಕ, ಅಧ್ಯಕ್ಷರಾಗಿ ಶಮೀನಾ ಆಳ್ವ, ಕಾರ್ಯದರ್ಶಿಯಾಗಿ ರಾಜೇಶ್ ಹೆಗ್ಡೆ ಪೊಳಲಿ, ಉಪಾಧ್ಯಕ್ಷರಾಗಿ ಗೋಪಾಡ್ಕರ್,ಆಶಾ ಶೆಟ್ಟಿ ಅತ್ತಾವರ, ಯಾದವ್ ಕೋಟ್ಯಾನ್ ಸಹಿತ ಎಲ್ಲಾ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಡಾ. ರಾಜೇಶ್ ಆಳ್ವ ಪ್ರಮಾಣ ವಚನ ಬೋಧಿಸಿದರು.

ಅಗರಿ ಶ್ರೀನಿವಾಸ ಭಾಗವತರು ಬರೆದ, ಮೂಲ ಕನ್ನಡ ದೇವಿ ಮಹಾತ್ಮೆ ಪ್ರಸಂಗವನ್ನು  ದೇವದಾಸ್ ಈಶ್ವರಮಂಗಲ ತುಳುವಿಗೆ ಅನುವಾದಿಸಿ, ಸರಪಾಡಿ ಅಶೋಕ್ ಶೆಟ್ಟಿ ಸಂಪಾದಿಸಿದ,  ಐಲೇಸಾ ಬೆಂಗಳೂರು ಮತ್ತು ಟೋಟಲ್ ಕನ್ನಡ ಇವರು ಪುಸ್ತಕ ಪ್ರಕಾಶನ ಮಾಡಿದ ಸಿರಿ ದೇವಿ ಮಾತ್ಮೆ ಯಕ್ಷಗಾನ ಪ್ರಸಂಗ ಪುಸ್ತಕ ಬಿಡುಗಡೆಗೊಳಿಸಲಾಯಿತು.           

ವಾಯ್ಸ್ ಆಫ್ ಆರಾಧನಾ ತಂಡದ  ಮಕ್ಕಳಿಂದ ಜೋಕ್ಲೆ ಮಿನದನ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂತು. ಮಂಗಳೂರು ಪುರಭವನದಲ್ಲಿ  ಪ್ರಪ್ರಥಮ ಬಾರಿಗೆ ತುಳು ಭಾಷೆಯಲ್ಲಿ ಭಾಗವತಿಕೆ ಸಹಿತ ತುಳು ದೇವಿ ಮಹಾತ್ಮೆ ಯಕ್ಷಗಾನವನ್ನು ರಾಜ್ಯ ಪ್ರಶಸ್ತಿ ವಿಜೇತ ಸರಪಾಡಿ ಅಶೋಕ್ ಶೆಟ್ಟಿ ಸಂಯೋಜನೆಯಲ್ಲಿ ಸುಮಾರು 40 ಮಂದಿ ತೆಂಕುತಿಟ್ಟಿನ ಹೆಮ್ಮೆಯ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಯಶಸ್ವಿ ಪ್ರದರ್ಶನ ಕಂಡಿತು.

  ಕಾರ್ಯಕ್ರಮದ ಕೊನೆಯಲ್ಲಿ ಸರಪಾಡಿ ಅಶೋಕ ಶೆಟ್ಟರನ್ನು  ತುಳುವರೇ ಆಯನೊ  ಕೂಟದ ಸದಸ್ಯರು ಮತ್ತು ಹಿತೈಷಿಗಳ ಸಮ್ಮುಖದಲ್ಲಿ ಡಾಕ್ಟರ್ ಮಂದಾರ ರಾಜೇಶ್ ಭಟ್ ಜೊತೆಗೂಡಿ ಗೌರವಿಸಿದರು.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…

3 days ago

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…

3 days ago

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…

4 days ago

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…

4 days ago

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…

4 days ago

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…

4 days ago