
ಶ್ರೀ.ಕ್ಷೇತ್ರ. ಧ. ಗ್ರಾ. ಯೋಜನೆಯ ವಿಟ್ಲ ತಾಲ್ಲೂಕಿನ ಸಾಲೆತ್ತೂರು ವಲಯದ ಶೌರ್ಯ ಘಟಕದ ಸದಸ್ಯರು ವಲಯದ ಮೇಲ್ವಿಚಾರಕರಾದ ಶ್ರೀಮತಿ ಮೋಹಿನಿಯವರ ಮಾರ್ಗದರ್ಶನದಲ್ಲಿ ಇಂದು ಸಾಲೆತ್ತೂರು ವಲಯ ಕಛೇರಿ,ಮಂಚಿ ಅಂಚೆ ಕಚೇರಿಯ ಸುತ್ತ, ಮುತ್ತ ಹುಲ್ಲು, ಕಸಕಡ್ಡಿ ತೆಗೆದು ಸ್ವಚ್ಛತಾ ಕಾರ್ಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿಯ ಮೇಲ್ಚಾವಣಿ ಸ್ವಚ್ಛತೆ ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಸಂಯೋಜಕಿಯರಾದ ಶ್ರೀಮತಿ ಕುಶಾಲ, ಸೇವಾಪ್ರತಿನಿಧಿ ಶ್ರೀಮತಿ ಜಯಶ್ರೀ ಕಛೇರಿ ಸಹಾಯಕಿ (CSC )ಶ್ರೀಮತಿ ವಿದ್ಯಾ ಮತ್ತು ಅರೋಗ್ಯ ಕೇಂದ್ರದ ಹಿರಿಯ ಶುಶ್ರೂಷಕಿ ಶ್ರೀಮತಿ ಸುಶೀಲ ಹಾಗೂ ಅರೋಗ್ಯ ಕೇಂದ್ರ ಸಹಾಯಕಿ ಶ್ರೀಮತಿ ಮೀನಾಕ್ಷಿ ಉಪಸ್ಥಿತರಿದ್ದರು. ತಂಡದ ಅಧ್ಯಕ್ಷರಾದ ಪುರುಷೋತ್ತಮ್, ಸದಸ್ಯರಾದ ನವೀನ್ ಕಜೆ, ಗಣೇಶ್,ಜಯರಾಮ, ಪುಷ್ಪರಾಜ್, ನವೀನ್ ಸ್ವಯಂ ಸೇವಕರಾಗಿ ಸಹಕರಿಸಿದರು.




