ಬ0ಟ್ವಾಳ ತಾಲೂಕು ನರಿಕೊಂಬು ಗ್ರಾಮದ ಕೆದ್ದೇಲುಗುತ್ತು ಎಂಬಲ್ಲಿ ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀ ನಾಲ್ಕೈತ್ತಾಯ ಹಾಗೂ ಶ್ರೀ ಪರಿವಾರ ದೈವಗಳ ಧರ್ಮ ಚಾವಡಿಯು ಅಂದಾಜು 2 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳಲಿದೆ.

ಈ ಬಗ್ಗೆ ಅಷ್ಟಮಂಗಳ ಪ್ರಶ್ನಾಚಿಂತನೆಯು ಪೂರ್ಣಗೊಂಡು ಪ್ರಥಮ ಹಂತವಾಗಿ ಕೆದ್ದೇಲುಗುತ್ತು ಮನೆಯಲ್ಲಿ ಪರಿಹಾರ ಕಾರ್ಯವಾಗಿ ಹೋಮ ಹವನಗಳು ಕೆದ್ದೇಲುಗುತ್ತು ಪಾಂಡಿ ಪೂಜಾರಿ ಸುವರ್ಣ ಕುಟುಂಬಸ್ಥರ ವತಿಯಿಂದ ಆದಿತ್ಯವಾರದಂದು ನಡೆಯಿತು,

ತಂತ್ರಿವರ್ಯರಾದ ನೀಲೇಶ್ವರ ಪದ್ಮನಾಭ ಉಚ್ಚಿಲತ್ತಾಯ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ ಭಾಗ್ಯ ಸೂಕ್ತ, ಸಪ್ತ ಸೂಕ್ತ, ಐಕ್ಯ ಮಂತ್ರ ಸೂಕ್ತ ಸಹಿತ ಗಣಪತಿ ಹೋಮ ಮತ್ತು 5 ಕಾಯಿ ಗಣಹೋಮ ನಡೆಯಿತು. ಸಂಜೆ ಸುದರ್ಶನ ಹೋಮ ದುರ್ಗಾನಮಸ್ಕಾರ ಪೂಜೆ ಮತ್ತು ಭೂತ ಮಾರಣ ಬಲಿ ನಡೆದಿದೆ.

ಇನ್ನೂ ಟ್ರಸ್ಟ್ ನ ಗೌರವಾಧ್ಯಕ್ಷ ಗೋಪಾಲ ಸುವರ್ಣ ಮತ್ತು ಅಧ್ಯಕ್ಷ ಜಗನ್ನಾಥ ಕಲ್ಲಡ್ಕ, ಕೊರಗಪ್ಪ ಪೂಜಾರಿ ಹಾಗೂ ಟ್ರಸ್ಟಿಗಳ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಭಾಗಿಯಾಗಿದ್ರು.



