ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯುವತಿ ಮಂಡಲ ( ರಿ) ಹಳೆಯಂಗಡಿ ಇದರ ವತಿಯಿಂದ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿ ಇವರ ಸಹಕಾರದೊಂದಿಗೆ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಆಚರಣೆ ಯು ನಿನ್ನೆ ಸಂಜೆ 4.30 ಗಂಟೆಗೆ ಯುವತಿ ಮಂಡಲದ ಸಭಾಭವನದಲ್ಲಿ ಜರುಗಿತು. ಈ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಬಗೆಗಿನ ಮಾಹಿತಿಯನ್ನು ಯುವತಿ ಮಂಡಲದ ಕೋಶಾಧಿಕಾರಿ ಕು|ನಿರ್ಮಿತ ಇವರು ತಿಳಿಸಿದರು.

ಅದೇ ರೀತಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬಗ್ಗೆ ಕು|ಭೂಮಿಕಾ ಇವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಯುವತಿ ಮಂಡಲದ ಅಧ್ಯಕ್ಷರಾದ ರಶ್ವಿತಾ ,ಕಾರ್ಯದರ್ಶಿ ದಿವ್ಯಶ್ರೀ ರಮೇಶ್ ಕೋಟ್ಯಾನ್ ಮತ್ತು ಕ್ರೀಡಾ ಕಾರ್ಯದರ್ಶಿ ಶ್ವೇತಾ,ರಮ್ಯಾ,ಸೌಮ್ಯ,ರಿದಾ ಫಾತಿಮಾ,ಹೇಮಾವತಿ,ಜಯಶ್ರೀ,ದಾಕ್ಷಾಯಿಣಿ,ಸುಷ್ಮಾ,ರೋಶ್ನಿ ಭಾಗವಹಿಸಿದ್ದರು.



