ಮುಲ್ಕಿ : ಪೊಲೀಸ್ ಠಾಣೆಯ ವ್ಯಾಪ್ತಿಯ ಬೆಳ್ಳಾಯರು ಗ್ರಾಮದ ಕೋಲ್ನಾಡು ಚಂದ್ರ ಮೌಳೀಶ್ವರ ರಸ್ತೆಯ ಶ್ರೀನಿಧಿ ಮನೆಯಲ್ಲಿ ವಾಸವಾಗಿದ್ದ ಶ್ರೀಮತಿ ವಸಂತಿ ಶೆಟ್ಟಿ ರವರ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಅಪರಿಚಿತ 4 ಜನರು ದರೋಡೆ ಹಾಗೂ ಚಂದ್ರಮೌಳೀಶ್ವರ ಬಸ್ ಸ್ಟ್ಯಾಂಡ್ ಬಳಿ ಸೂರಪ್ರಕಾಶ್ ಎನ್ ಎಂಬವರು ನಿಲ್ಲಿಸಿದ ತನ್ನ ಕೆಎ-19-ಇಸಿ-2398 ನೇ ನೋಂದಣಿ ಸಂಖ್ಯೆ ಬಜಾಜ್ ಡಿಸ್ಕವರ್ 50 ಸಿಸಿ ಕಳವಾದ ಬಗ್ಗೆ ಮುಲ್ಕಿ ಪೋಲೀಸರು 5 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಗಳನ್ನು ದಾವಣಗೆರೆ ಮೂಲದ ರಘು ಎಸ್(30).ಪ್ರಮೋದ್ ವಿ. (23), ಹೆಚ್.ರವಿಕಿರಣ್, (23) ದಾವಲ ಸಾಬ್ ಹೆಚ್,(25), ಮಂಜುನಾಥ, (29) ಎಂದು ಗುರುತಿಸಲಾಗಿದೆ.

ಈ ಎರಡೂ ಪ್ರಕರಣಗಳ ಆರೋಪಿಗಳ ಬಗ್ಗೆ ಮುಲ್ಕಿ ಪೊಲೀಸರು ತಲಾಷೆಯಲ್ಲಿರುವಾಗ ಮುಲ್ಕಿ ಠಾಣಾ ಪಿ.ಎಸ್.ಐ. ಮಾರುತಿ.ಪಿ. ರವರು ಪುನರೂರು ಚಕ್ ಪೋಸ್ಟ್ ಬಳಿ ಸಿಬ್ಬಂದಿಗಳ ಜೊತೆ ವಾಹನ ತಪಾಸಣೆಯಲ್ಲಿರುವಾಗ ಈ ಪ್ರಕರಣಕ್ಕೆ ಸಂಬಂಧಿಸಿದ ಓರ್ವ ಆರೋಪಿ ರಘು ಎಸ್ ನನ್ನು ಮುಲ್ಕಿಯಲ್ಲಿ ಕಳವು ಮಾಡಿ ವಸಂತಿ ಶೆಟ್ಟಿ ರವರ ಕರಿಮಣಿ ಸರವನ್ನು ದರೋಡೆ ಮಾಡಲು ಉಪಯೋಗಿಸಿದ ಕೆಎ-19-ಇಸಿ-2398 ನೇ ನೋಂದಣಿ ಸಂಖ್ಯೆ ಬಜಾಜ್ ಪತ್ತೆ ಹಚ್ಚಿದ್ದು, ಡಿಸ್ಕವರ್ ಬೈಕನ್ನು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆಹಾಜರುಪಡಿಸಲಾಗಿತ್ತು.
ವಿಚಾರಣೆಯಲ್ಲಿ ಈ ಪ್ರಕರಣದ ಇನ್ನುಳಿದ ಆರೋಪಿಗಳ ತಲಾಷೆಯಲ್ಲಿರುವಾಗ ಅಕ್ಟೋಬರ್:03 ರಂದು ಮುಲ್ಕಿ ಠಾಣಾ ಪೊಲೀಸ್ ನಿರೀಕ್ಷಕರಾದ ವಿದ್ಯಾಧರ ಡಿ ಬಾಯ್ಕರಿಕರ್ ರವರು ಪುನರೂರು ಎಂಬಲ್ಲಿ ವಾಹನ ತಪಾಸಣೆಯಲ್ಲಿದ್ದಾಗ ಸಂಶಯಾಸ್ಪದವಾಗಿ ಬಂದ ಎರಡು ಮೋಟಾರ್ ಸೈಕಲ್ ಮತ್ತು ಒಂದು ಕಾರನ್ನು ತಡೆದು ನಿಲ್ಲಿಸಿ ಅದರಲ್ಲಿದ್ದ ಸವಾರರನ್ನು ವಿಚಾರಣೆಗೊಳಪಡಿಸಿದಾಗ ಮೇಲ್ಕಂಡ ಪ್ರಕರಣದಲ್ಲಿ ಭಾಗಿಯಾದ 4 ಜನ ಆರೋಪಿಗಳು ಆ ಮೋಟಾರ್ ಸೈಕಲ್ ಗಳಲ್ಲಿ ಮತ್ತು ಕಾರಿನಲ್ಲಿ ಇರುವುದನ್ನು ಪತ್ತೆ ಮಾಡಿ 4 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳಿಂದ ಸ್ವತ್ತುಗಳನ್ನು ಸ್ವಾಧೀನ ಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಅದರಲ್ಲಿ 2 ಜನ ಆರೋಪಿಗಳನ್ನು ಹೆಚ್ಚಿನ ವಿಚಾರಣೆಯ ಬಗ್ಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಆರೋಪಿಗಳಿಂದ ಹೋಂಡಾ ಗ್ರೀಮ್ ಯುಗ ಕಂಪನಿಯ ಕೆ.ಎ.20.ಇ.ಇ.0610 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲ್, ನೋಂದಣಿ ಸಂಖ್ಯೆ ಅಳವಡಿಸದ ರಾಯಲ್ ಎನ್ ಫೀಲ್ಡ್ ಕಂಪನಿಯ ಬುಲೆಟ್ ಮೋಟಾರ್ ಸೈಕಲ್.ಸಿಲ್ವರ್ ಬಣ್ಣದ ಕೆ.ಎ.17.ಡಿ.2209 ನೇ ನೋಂದಣಿ ಸಂಖ್ಯೆ ಇಟಿಯೋಸ್ ಟೂರಿಸ್ಟ್ ಕಾರು.39,670 ಗ್ರಾಂ ತೂಕದ ಚಿನ್ನದ ತುಂಡಾದ ಕರಿಮಣಿ ಸರ, ಸೊತ್ತುಗಳ ಒಟ್ಟು ಮೌಲ್ಯ 7,3,000/- ರೂ ಆಗಬಹುದು. ಎಂದು ಅಂದಾಜಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪತ್ತೆ ಕಾರ್ಯವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್, ಐ.ಪಿ.ಎಸ್ ರವರ ಮಾರ್ಗದರ್ಶನಂದಂತೆ, ಕಾನೂನು & ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ ಗೋಯಲ್ ಐ.ಪಿ.ಎಸ್. ಮತ್ತು ಅಪರಾಧ & ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ನಿರ್ದೇಶನದಂತೆ ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಮನೋಜ್ ಕುಮಾರ್ ರವರ ನೇತೃತ್ವದಲ್ಲಿ ಈ ಆರೋಪಿಗಳ ಮತ್ತು ಸೊತ್ತು ಪತ್ತೆ ಕಾವ್ಯದಲ್ಲಿ ಮುಲ್ಕಿ ಪೊಲೀಸ್ ಠಾಣೆಯ ಪಿ.ಐ. ವಿದ್ಯಾಧರ ಡಿ ಬಾಯ್ಕರಿಕರ್, ಪಿ.ಎಸ್.ಐ ಗಳಾದ ವಿನಾಯಕ ಬಾವಿಕಟ್ಟಿ, ಮಾರುತಿ.ಪಿ, ಎ.ಎಸ್.ಐ. ಸಂಜೀವ, ಉಮೇಶ್, ಸುರೇಶ್ ಕುಂದರ್ ಹೆಚ್.ಸಿಗಳಾದ ಕಿಶೋರ್ ಕುಮಾರ್, ಶಶಿಧರ, ಮಹೇಶ್, ಪ್ರಮೋದ್, ಚಂದ್ರಶೇಖರ್, ವಿಶ್ವನಾಥ, ಉದಯ್, ಜಯರಾಮ್, ಸತೀಶ್, ಪವನ್ ಮತ್ತು ಪಿ.ಸಿ.ಗಳಾದ ಅರುಣ್ ಕುಮಾರ್, ವಾಸುದೇವ, ವಿನಾಯಕ, ಶಂಕರ, ಶ್ರೀಮತಿ ಚಿತ್ರಾ, ಚೆಲುವರಾಜ್, ಶೇಖರ, ಯಶವಂತ್, ಬಸವರಾಜ್, ಸುರೇಂದ್ರ, ಅಂಜಿನಪ್ಪ, ಇಮಾಮ್, ಶರಣಪ್ಪ ರವರು ಕಾರ್ಯಚರಣೆಯಲ್ಲಿ ಸಹಕರಿಸಿದ್ದರು



