ಎಚ್. ಟಿ ಲೈನ್‌ನ ವಿದ್ಯುತ್ ತಂತಿ ತುಂಡಾಗಿ ರಸ್ತೆಗೆ ಬಿದ್ದಿದ್ದು, ರಬ್ಬರ್ ಟ್ಯಾಪಿಂಗ್‌ಗೆ ತೆರಳುತ್ತಿದ್ದ ವ್ಯಕ್ತಿಯ ಸಮಯ ಪ್ರಜ್ಞೆಯಿಂದ ಸಂಭವನೀಯ ಅನಾಹುತ ತಪ್ಪಿದೆ.

ಕಲಂಜ ಗ್ರಾಮದ ಕುಡೆಂಚಿ- ಮೂಲಾರು ರಸ್ತೆಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಬೆಳಗ್ಗೆ ಟ್ಯಾಪಿಂಗ್ಗೆ ತೆರಳುತ್ತಿದ್ದ ಸ್ಥಳೀಯ ದಿನೇಶ್ ನಾಯ್ಕ ಎಂಬವರು ಗಮನಿಸಿ ಮೆಸ್ಕಾಂಗೆ ಮಾಹಿತಿ ನೀಡಿ, ಸಂಪರ್ಕ ಕಡಿತಗೊಳಿಸಲು ತಿಳಿಸಿದರು. ಸ್ಥಳೀಯರ ಮಾಹಿತಿ ಹಾಗೂ ಮೆಸ್ಕಾಂನ ತುರ್ತು ಸ್ಪಂದನೆಯಿಂದ ಸಂಭವಿಸಬಹುದಾದ ಅನಾಹುತ ತಪ್ಪಿದೆ.



