ನವ ಭಾರತ್ ಯುವಕ ಸಂಘ (ರಿ) ಅನಂತಾಡಿ ಇದರ ವತಿಯಿಂದ “ಕೆಸರ್ದ ಕಂಡೋಡು ಕುಸಲ್ದ ಗೊಬ್ಬುಲು” ಕ್ರೀಡಾಕೂಟವು ಅನಂತಾಡಿ ಗ್ರಾಮದ ಪಡಿಪ್ಪಿರೆ ಎಂಬಲ್ಲಿ ಅ.8 ರ ಆದಿತ್ಯವಾರದ0ದು ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಪಡಿಪ್ಪಿರೆ ಇವರ ಅಧ್ಯಕ್ಷತೆಯಲ್ಲಿ ಜರಗಲಿರುವುದು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಉಳ್ಳಾಲ್ತಿ ದೇವಸ್ಥಾನ ಅನಂತಾಡಿ ಇದರ ಆಡಳಿತ ಮುಕ್ತೆಸ್ಥರಾದ ನರೇಂದ್ರ ರೈ ನೆಲ್ತೋಟು ಮಾಡಲಿದ್ದು, ಕ್ರೀಡಾ ಜ್ಯೋತಿಯ ಚಾಲನೆಯನ್ನು ಉಳ್ಳಾಲ್ತಿ ದೇವಸ್ಥಾನ ಅರ್ಚಕರಾದ ಗೋಪಾಲಕೃಷ್ಣ ಬನ್ನಿ೦ತಾಯ ನೆರವೇರಿಸಲಿದ್ದು, ಶಿಕ್ಷಕ ಗೋಪಾಲಕೃಷ್ಣ ನೆರಳಕಟ್ಟೆ ಧ್ವಜಾರೋಹಣ ಮಾಡಲಿರುವರು. ಕೆಸರುಗದ್ದೆ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷರಾದ ಸಂಜೀವ ಪೂಜಾರಿ ಹಾಗೂ ದೈವ ಪರಿಚಾರಕರಾದ ವಿಟ್ಟಲ ಪೋಯ್ಯ ಮಾಡಲಿರುವರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತುಳುನಾಡ ಸಾಂಸ್ಕೃತಿಕ ಚಿಂತಕರಾದ ತಮ್ಮಣ್ಣ ಶೆಟ್ಟಿ, ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತ ಸುರೇಶ್, ಮಾಣಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕಿರಣ್ ಹೆಗ್ಡೆ, ಚಲನಚಿತ್ರ ನಟ ಚೇತನ್ ರೈ ಮಾಣಿ, ಶಿಕ್ಷಕ ವೆಂಕಟೇಶ್ ಬಂಟ್ರಿಂಜ, ವಕೀಲರಾದ ರಮೇಶ್ ಮಠದಮೂಲೆ, ದೈವ ಪರಿಚಾರಕರುಗಳಾದ ರುಕ್ಮಯ ಗೌಡ ನಡುಮನೆ, ಲಕ್ಷ್ಮಣ ಪೂಜಾರಿ ಬಾಕಿಲ, ಪದ್ಮನಾಭ ಪೂಜಾರಿ ಇಡೆಮುಂಡೆವು, ಚಿದಾನಂದ ಗೌಡ ತಾಳಿಪಡುಪು, ರಾಮಣ್ಣ ಗೌಡ ಮಾಣಿ, ಬಾಲಪ್ಪ ಪೊಯ್ಯೇ, ಮೊದಲಾದವರು ಉಪಸ್ಥಿತರಿರುವರು.
ವಿಶೇಷ ಗೌರವಿತ ಆಹ್ವಾನಿತರಾಗಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಮಾಜಿ ಸಚಿವರಾದ ರಮನಾಥ ರೈ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಭಾಗವಹಿಸಲಿರುವರು. ಕಾರ್ಯಕ್ರಮದಲ್ಲಿ 2023 ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಗೋಪಾಲಕೃಷ್ಣ ನೆರಳಕಟ್ಟೆ, ನೆರಳಕಟ್ಟೆ ಸಹಕಾರಿ ಬ್ಯಾಂಕಿನ ನಿವೃತ್ತ ಪ್ರಬಂಧಕರಾದ ಸಂಜೀವ ಪೂಜಾರಿ, ನಿವೃತ್ತ ಮುಖ್ಯ ಶಿಕ್ಷಕಿ ಸುಂದರಿ ಅಶ್ವತಡಿ, ನಿವೃತ್ತ ಶಿಕ್ಷಕಿ ಅಮ್ಮತಾಯಿ, ಅನಂತಾಡಿ ಶಾಲೆಯ ವರ್ಗಾಯಿತ ಶಿಕ್ಷಕ ರಾಧಾಕೃಷ್ಣ ಮೂಲ್ಯ, ಯುವ ಕಂಬಲ ಓಟಗಾರ ರಾಜೇಶ್ ಅನಂತಾಡಿ, ಮಹಮ್ಮದ್ ಶರೀಫ್ ಮಜಲಹಿತ್ತಿಲು ಇವರುಗಳನ್ನು ಅಭಿನಂದಿಸಲಾಗುವುದು. ಹಾಗೂ ಸಂಘದ ಗೌರವ ಸಲಹೆಗಾರರಾಗಿದ್ದು ಕಳೆದ ತಿಂಗಳು ಅಗಲಿದ ದಿವಂಗತ ತೀರ್ಥ ಪ್ರಸಾದ್ ಕೊಂಗಲಾಯಿ ಯವರಿಗೆ ಸಂಘದ ವತಿಯಿಂದ ಪುಷ್ಪ ನಮನದ ಮೂಲಕ ಗೌರವಾರ್ಪಣೆ ನೆರವೇರಲಿರುವುದು ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿರುತ್ತಾರೆ.
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…