ಕಾಸರಗೋಡು; ಯುವತಿಯೊಬ್ಬಳಿಗೆ ವಿವಾಹದ ಭರವಸೆ ನೀಡಿ ಮೂರು ವರ್ಷ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಿಗ್ ಬಾಸ್ ಸ್ಪರ್ಧಿ ಶಿಯಾಝ್ ಕರೀಂನನ್ನು ಕಾಸಗೋಡು ಪೊಲೀಸರು ಬಂಧಿಸಿದ್ದಾರೆ.

ಎರ್ನಾಕುಲಂ ಜಿಮ್ ಒಂದರಲ್ಲಿ ಕೆಲಸಕ್ಕಿದ್ದ ಯುವತಿಯ ಸ್ನೇಹ ಬೆಳೆಸಿ ಮದುವೆಯಾಗುವುದಾಗಿ ನಂಬಿಕೆ ಮೂರು ವರ್ಷ ಲೈಂಗಿಕ ಕಿರುಕುಳ ನೀಡಿದ್ದಾನೆ. ಅದಲ್ಲದೇ ಯುವತಿಯಿಂದ ಬರೋಬ್ಬರೀ 10 ಲಕ್ಷ ಹಣವನ್ನು ಪಡೆದಿದ್ದಾನೆ.

ಇನ್ನೂ ಆರೋಪಿ ಶಿಯಾಝ್ ಕರೀಂ ನಟನಾಗಿ, ಜೊತೆಗೆ ಮಲಯಾಳಂ ಸೀಸನ್ 1ರ ಬಿಗ್ ಬಾಸ್ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದನು. ಈ ಬಗ್ಗೆ ಯುವತಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು, ದೂರಿನ್ವಯ ಇದೀಗ ಕಾಸರಗೋಡು ಚಂದೇರಾ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.



