ಪುತ್ತೂರು; ಮೂಡಬಿದ್ರೆಯ ಆಳ್ವಾಸ್ ಪ್ರಗತಿ ಉದ್ಯೋಗ ಮೇಳಕ್ಕೆ ಪುತ್ತೂರಿನಿಂದ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸುಮಾರು ೩೫೦ಮಂದಿ ಉದ್ಯೋಗ ಆಕಾಂಕ್ಷಿಗಳು ಪುತ್ತೂರಿನಿಂದ ತೆರಳಿದ್ದಾರೆ.

ಉದ್ಯೋಗ ಮೇಳಕ್ಕೆ ತೆರಳುವ ಆಕಾಂಕ್ಷಿಗಳಿಗೆ ಶಾಸಕರ ಟ್ರಸ್ಟ್ ಮೂಲಕ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಸ್ಟ್ ಕರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ಶಾಂತಿನಗರ, ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಆಳ್ವಾಸ್ಗೆ ತೆರಳುವ ಮಂದಿಗೆ ಬಸ್ನ ವ್ಯವಸ್ಥೆ ಹಾಗೂ ಇತರೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿ ಟ್ರಸ್ಟ್ ಮೂಲಕ ಮೆಸ್ಕಾಂನಲ್ಲಿ ವಿದ್ಯುತ್ ಕಂಬ ಹತ್ತುವ ತರಬೇತಿ ಮತ್ತು ಪೊಲೀಸ್ ತರಬೇತಿಯನ್ನು ಆಯೋಜಿಸಲಾಗುವುದು. ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಸೂಕ್ತ ಜೀವನ ಭದ್ರತೆಯನ್ನು ನೀಡುವಲ್ಲಿ ಟ್ರಸ್ಟ್ ನಿರಂತರವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.

ಉದ್ಯೋಗ ಮೇಳದ ಆಯೋಜಕರಾದ ನಿಹಾಲ್ ಶೆಟ್ಟಿ ಮಾತನಾಡಿ ವಿವಿಧ ಕಂಪೆನಿಗಳಲ್ಲಿ ಉದ್ಯೋಗಕ್ಕಾಗಿ ಸಂರ್ಶನಕ್ಕೆ ತೆರಳುವ ಆಕಾಂಕ್ಷಿಗಳು ಯಾವ ರೀತಿ ಸಂರ್ಶನವನ್ನು ಎದುರಿಸಬೇಕು ಎಂಬುದರ ಬಗ್ಗೆ ವಿವರಿಸಿದರು. ಉದ್ಯೋಗ ಯಾವುದೇ ಕಂಪೆನಿಯಲ್ಲಿ ದೊರೆತರೂ ನಾವು ಅಲ್ಲಿ ಕೆಲಸ ಮಾಡುವ ಆಸಕ್ತಿಯನ್ನು ಹೊಂದಿರಬೇಕು, ಉದ್ಯೋಗದಿಂದ ಯಾರೂ ವಂಚಿತರಾಗಬಾರದು. ವಿದ್ಯಾವಂತ ನಿರುದ್ಯೋಗಿಗಳು ಸದಾ ಉದ್ಯೋಗ ಹುಡುಕುವಲ್ಲಿ ಮುತುರ್ಜಿವಹಿಸಬೇಕು ಎಂದು ಹೇಳಿದರು.
ಕರ್ಯಕ್ರಮದಲ್ಲಿ ಶಾಸಕರ ಕಚೇರಿ ಸಿಂಬದಿಗಳಾದ ಪ್ರದೀಪ್, ಜುನೈದ್ ಬಡಗನ್ನೂರು, ಯೋಗೀಶ್ ಸಾಮಾನಿ, ಅಕ್ರಮಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ರಿತೇಶ್ ಶೆಟ್ಟಿ ಮಂಗಳೂರು, ನಗರ ಸಭಾ ಸದಸ್ಯ ರಿಯಾಝ್ ಉಪಸ್ಥಿತರಿದ್ದರು.



