ಮುಲ್ಕಿ: ಆದಿತ್ಯವಾರ ಸಂಜೆ ಗಂಟೆ 4.00 ರಿಂದ 5.00 ರವರೆಗೆ ಯುವಕ ಮಂಡಲದ ಸಭಾಂಗಣದಲ್ಲಿ ಕಿಶೋರ – ಕಿಶೋರಿ ಸಂಘದ ವಿದ್ಯಾರ್ಥಿಗಳಿಗೆ ರೇಬಿಸ್, ಮಲೇರಿಯಾ ಮತ್ತು ಡೆಂಗ್ಯೂ ರೋಗದ ಬಗ್ಗೆ ಮಾಹಿತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಸುರತ್ಕಲ್ ಇದರ ಹಿರಿಯ ಆರೋಗ್ಯ ಅಧಿಕಾರಿ ಶ್ರೀಮತಿ ಗೀತಾ ಇವರು ನೀಡಿದರು.
ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ನಾಗೇಶ್ ಟಿ ಜಿ, ಮಾಜಿ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್, ಯುವತಿ ಮಂಡಲದ ಪ್ರಧಾನ ಕಾರ್ಯದರ್ಶಿ ಕುಮಾರಿ ದಿವ್ಯಶ್ರೀ ಕೋಟ್ಯಾನ್, ಹಾಗೂ ಯುವಕ ಯುವತಿ ಮಂಡಲದ ಸದಸ್ಯರು ಉಪಸ್ಥಿತರಿದ್ದರು.




