ಮೂಡಬಿದಿರೆ: ಅಖಿಲ ಭಾರತ ಸಂತ ಸಮಿತಿ ಕರ್ನಾಟಕ ಪ್ರಾಂತ ಕಮಿಟಿ ಹಾಗೂ ಮೂಡುಬಿದಿರೆಯ ಶ್ರೀ ದಿಗಂಬರ ಜೈನ ಮಠದ ಸಂಯುಕ್ತ ಆಶ್ರಯದಲ್ಲಿ ಕೊಡಗು, ದ.ಕ ಹಾಗೂ ಉಡುಪಿ ಮೂರು ಜಿಲ್ಲೆಗಳ ಸಂತರ ಸಮಾವೇಶವು ಮಹಾವೀರ ಭವನದಲ್ಲಿ ಅಕ್ಟೋಬರ್ 9ರಂದು ಬೆಳಗ್ಗೆ 11.30ಕ್ಕೆ ನಡೆಯಲಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ, ಮಂಗಳೂರು ಚಿಲಿಂಬಿಯಲ್ಲಿರುವ ಓಂ ಶ್ರೀ ಮಠದ ಮಹಾಮಂಡಲೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಅವರು ಜೈನ ಮಠದ ರಮಾರಾಣಿ ಶೋಧ ಸಂಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಧರ್ಮರಕ್ಷಣೆ, ರಾಜ್ಯರಕ್ಷಣೆ, ಗೋರಕ್ಷಣೆ ಸಂತ ಸಮಿತಿಯ ಪ್ರಮುಖ ಆಧ್ಯತೆ. ಸನಾತನ ಸಂಸ್ಕೃತಿಗೆ ಶ್ರೇಷ್ಠ ಸ್ಥಾನಮಾನ ನೀಡುತ್ತಿರುವ ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸಮಾವೇಶ ನಡೆಯುತ್ತಿರುವುದು ಸಂತಸ. ಆಯೋಧ್ಯೆ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಸಂತರ ಪಟ್ಟಿ, ವಾರಣಾಸಿಯಲ್ಲಿ ನಡೆಯುವ ಸಂಸ್ಕೃತಿ ಸಂಸತ್ತಿನಲ್ಲಿ ಭಾಗವಹಿಸುವುದು, ಕರ್ನಾಟಕದಲ್ಲಿ ಸಂತರು ಹಾಗೂ ಸನಾತನಿಗಳು ಎದುರಿಸುವ ವಿಷಯಗಳು, ಮುಜರಾಯಿ ಇಲಾಖೆಯಿಂದ ಮಠಗಳಿಗೆ ಅಗತ್ಯವಾದ ಅನುದಾನ ಲಭ್ಯವಾಗುವ ಕುರಿತು, ಸಂಘಟನಾ ವಿಪಲಿಕರಣ ಸಹಿತ ವಿವಿಧ ವಿಚಾರಗಳು ಸಮಾವೇಶದಲ್ಲಿ ಚರ್ಚೆಯಾಗಲಿದೆ ಎಂದರು.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಸಂತರ ಹೊಂದಾಣಿಕೆ, ವೈಚಾರಿಕ ಚಿಂತನೆಗಳ ವಿನಿಮಯ, ಪರಸ್ಪರ ವಿಶ್ವಾಸವನ್ನು ಬೆಳೆಸುವಲ್ಲಿ ಈ ಸಮಾವೇಶ ನೆರವಾಗಲಿದೆ. ಧರ್ಮರಕ್ಷಣೆಗೆ ಈ ಸಮಾವೇಶವು ಉನ್ನತ ಕೊಡುಗೆ ನೀಡಲಿದೆ. ಕೆ.ಶ್ರೀಪತಿ ಭಟ್, ಬಾಹುಬಲಿ ಪ್ರಸಾದ್, ಬಸದಿಗಳ ಮೊಕ್ತೇಸರರು ಸೇರಿದಂತೆ 30 ಮಂದಿಯ ಸ್ವಾಗತ ಸಮಿತಿಯನ್ನು ಸಮಾವೇಶಕ್ಕಾಗಿ ರಚಿಸಲಾಗಿದೆ ಎಂದರು.
ಇನ್ನೂ ಈ ಸಂದರ್ಭದಲ್ಲಿ ರಾಜ್ಯ ಕಮಿಟಿಯ ಸಹ ಅಧ್ಯಕ್ಷೆ ಮಾತಾಶ್ರೀ ಓಂ ಶ್ರೀ ಶಿವಜ್ಞಾನಮಣಿ ಸರಸ್ವತಿ ಸಾಧ್ವಿ, ಬಸದಿಗಳ ಮೊಕ್ತೇಸರಾದ ಪಟ್ನಶೆಟ್ಟಿ ಸುಧೀಶ್ ಕುಮಾರ್, ಆನಡ್ಕ ದಿನೇಶ್ ಕುಮಾರ್ ಉಪಸ್ಥಿತರಿದ್ದರು.
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…
ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕೋಶಾಧಿಕಾರಿ ಹಾಗೂ ಯೂನಿಯನ್ ಬ್ಯಾಂಕಿನ ನಿವೃತ್ತ…
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…