ಮುಲ್ಕಿ: ಭಾರತ ಸರಕಾರ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರಕಾರ, ಜೀವನ ಸಾರ್ಥಕತೆ, ವೆನ್ ಲಾಕ್ ಜಿಲ್ಲಾ ಆಸ್ಪತ್ರೆ, ಪಡುಪಣಂಬೂರು ಗ್ರಾಮ ಪಂಚಾಯತ್, ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ತೂರು ಕೆಮ್ರಾಲ್, ರೋಟರಿ ಕ್ಲಬ್ ಬೈಕಂಪಾಡಿ ಇದರ ಸಹಕಾರದಲ್ಲಿ ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ 10ನೇ ತೋಕೂರು ಹಳೆಯಂಗಡಿ ಇವರ ಆಶ್ರಯದಲ್ಲಿ ಅಂಗಾಂಗ ದಾನ ಮಾಡಿ ಅಮೂಲ್ಯ ಜೀವನ ಉಳಿಸಿ ಕಾರ್ಯಕ್ರಮವನ್ನು ಇಂದು ಸಂಸ್ಥೆಯ ಕಾರ್ಯಾಲಯದಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕುಸುಮ ಚಂದ್ರಶೇಖರ್ ರವರು ವಹಿಸಿಕೊಂಡಿದ್ದು ಕಾರ್ಯಕ್ರಮದ ಬಗ್ಗೆ ಅಂಗಾಂಗ ದಾನ ಎಂಬುವುದು ಒಂದು ಜೀವದಾನ ಅದರ ಮಹತ್ವವನ್ನು ಅರಿತು ಪ್ರತಿಯೊಬ್ಬರು ಸ್ವಪ್ರೇರಣೆಯಿಂದ ಅಂಗಾಂಗ ದಾನವನ್ನು ಮಾಡಲು ಮುಂದೆ ಬರಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವೆನ್ಲಾಕ್ ಆಸ್ಪತ್ರೆಯ ಜೀವ ಸಾರ್ಥಕತೆ, ಅಂಗಾಂಗ ಕಸಿ ಸಂಯೋಜಕಿಯಾದ ಶ್ರೀಮತಿ ಪದ್ಮಾವತಿಯವರು, ಅಂಗಾಂಗ ದಾನದ ವಿಚಾರವಾಗಿ ಸವಿವರವಾಗಿ ವಿವರಿಸುತ್ತಾ ಬಹಳಷ್ಟು ಜನರಿಗೆ ಅಂಗಾಂಗಗಳ ಅವಶ್ಯಕತೆ ಇರುವುದರಿಂದ ಈ ಬಗ್ಗೆ ಪ್ರತಿಯೊಬ್ಬರು ಮುಂದೆ ಬಂದು ಅಂಗಾಂಗ ದಾನವನ್ನು ಮಾಡಬೇಕು ಈ ಬಗ್ಗೆ ಯುವ ಸಂಘಟನೆಗಳು ಜನರಲ್ಲಿ ಅರಿವು ಮೂಡಿಸಬೇಕು ಎಂಬುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ರಾಲ್ ಇಲ್ಲಿನ ಸುರಕ್ಷಾಧಿಕಾರಿ ಶ್ರೀಮತಿ ಮಾರ್ಗರೇಟ್ ಸುದರ್ಶಿನಿ, ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಕೋಮಲ, ಮತ್ತು ಆಶಾ ಕಾರ್ಯಕರ್ತೆಯರು, ಫೇಮಸ್ ಯೂತ್ ಕ್ಲಬ್ಬಿನ ಕಾರ್ಯದರ್ಶಿ ಹಿಮಕರ್, ಮಹಿಳಾ ಅಧ್ಯಕ್ಷೆ ಪ್ರೇಮಲತಾ ಯೋಗೀಶ್, ಉಪಾಧ್ಯಕ್ಷೆ ಅಮಿತಾ ದಿನಕರ್ ಸಾಲ್ಯಾನ್, ಕಾರ್ಯದರ್ಶಿ ಕುಸುಮ ಎಚ್ಕೋ. ಟ್ಯಾನ್, ಕೋಶಾಧಿಕಾರಿ ಇಂದಿರಾ ಸಂಜೀವ ಕರ್ಕೇರ, ವಿಶ್ವಬ್ಯಾಂಕ್ ಕುಡಿಯುವ ನೀರು ಮತ್ತು ಪರಿಸರ ನೈರ್ಮಲ್ಯ ಸಮಿತಿಯ ಅಧ್ಯಕ್ಷರಾದ ದಿನಕರ ಸಾಲ್ಯಾನ್, ಬಿಲ್ಲವ ಸಮಾಜ ಸೇವಾ ಸಂಘ ಹಳೆಯಂಗಡಿ ಗೌರವಾಧ್ಯಕ್ಷರಾದ ಶ್ರೀ ಗಣೇಶ್ ಜಿ ಬಂಗೇರ, ರೋಟರಿ ಸಮುದಾಯದಳದ ಅಧ್ಯಕ್ಷರಾದ ಮೋಹನ್ ದಾಸ್ ದೇವಾಡಿಗ,
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಹಿಳಾ ಅಧ್ಯಕ್ಷರಾದ ಪ್ರೇಮಲತಾ ಯೋಗೀಶ್ ರವರು ಪ್ರಸ್ತಾವನೆಗೈದು ಸ್ವಾಗತವನ್ನು ನಿರ್ವಹಿಸಿದ್ದರು, ಮಹಮ್ಮದ್ ಶರೀಫ್ ರವರು ಧನ್ಯವಾದವನ್ನು ಅರ್ಪಿಸಿದರು, ಸಂಸ್ಥೆಯ ಕಾರ್ಯದರ್ಶಿ ಹಿಮಕರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗಳಿಬ್ಬರ ಮೃತದೇಹಗಳು ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಲ್ ಪ್ರದೇಶದ…
ಉಡುಪಿ ನಗರದ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್‌ವೊಂದು ಕಳವಾಗಿರುವ ಘಟನೆ ಸೆ.29ರಂದು ಬೆಳಕಿಗೆ ಬಂದಿದ್ದು,…
ಮಂಗಳೂರು ವಿಶ್ವವಿದ್ಯಾನಿಲಯದ 16 ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು 2026-27ನೇ ಶೈಕ್ಷಣಿಕ ಸಾಲಿನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೋರ್ಸ್‌ಗಳನ್ನು ಮುಂದುವರಿಸಲು ಅಗತ್ಯವಿರುವಷ್ಟು ವಿದ್ಯಾರ್ಥಿಗಳು…
ಮಂಗಳೂರು ಮತ್ತು ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸರ್ಕ್ಯೂಟ್ ಬೆಂಚ್ ಅಥವಾ ಶಾಶ್ವತ ಪೀಠ ಸ್ಥಾಪಿಸುವ…
ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಪ್ರಯಾಣಿಸುತ್ತಿದ್ದ ಕಾರಿಗೆ ಗೂಡ್ಸ್ ಆಟೋ ರಿಕ್ಷಾ ಡಿಕ್ಕಿಯಾಗಿ, ತೀವ್ರವಾಗಿ ಗಾಯಗೊಂಡಿದ್ದ ಆಟೋ…
ನೇಪಾಳದಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದು, ಸೆ.24ರಿಂದ ಈವರೆಗೆ ಕನಿಷ್ಠ…