ಸಾಮಾನ್ಯವಾಗಿ ಮನುಷ್ಯನಿಗೆ ಬರುವ ಹೃದಯ ಸಂಬಂಧಿ ಕಾಯಿಲೆಗಳಲ್ಲಿ ಮೂರು ವಿಧಗಳು. ಹೃದಯಾಘಾತ, ಹೃದಯ ವೈಫಲ್ಯ ಹಾಗೂ ಹೃದಯ ಸ್ಥಂಭನ.

ಇವುಗಳಿಗೆ ನಾನಾ ಕಾರಣಗಳಿವೆ. ಆದರೆ ನಾವು ದಿನ ನಿತ್ಯ ಸೇವಿಸುವ ಆಹಾರ ಪದ್ಧತಿಯೇ ಅತೀ ಮುಖ್ಯವಾಗಿದೆ. ಅದಕ್ಕಾಗಿ ಪ್ರತಿ ದಿನ ನಡಿಗೆ, ಲಘು ವ್ಯಾಯಾಮ ಹಾಗೂ ಆಹಾರದಲ್ಲಿ ಪಥ್ಯವನ್ನು ಹೊಂದುವುದು ಉತ್ತಮ ವಿಧಾನವಾಗಿದೆ. ಇತ್ತೀಚಿನ ದಿನಗಳಲ್ಲಿ ಯುವ ಜನತೆಯೇ ಹೆಚ್ಚಾಗಿ ಹೃದಯ ಸಂಬಂಧೀ ಕಾಯಿಲೆಗಳಿಂದ ಸಾವನ್ನಪುವುದು ಅತ್ಯಂತ ಖೇದಕರ ಸಂಗಾತಿಯಾಗಿದೆ.
ಇವುಗಳಿಗೆ ಮುನ್ನೆಚ್ಚರಿಕೆಯೇ ಪರಿಹಾರ” ಎಂದು ವಿಶ್ವ ಹೃದಯ ದಿನಾಚರಣೆಯ ಪ್ರಯುಕ್ತ ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಖ್ಯಾತ ಹೃದಯ ತಜ್ಞರಾದ ಡಾ. ದಿತೇಶ್ ಎಂ. ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸವಿವರವಾದ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್‌ರವರು, ವಿದ್ಯಾರ್ಥಿ ಜೀವನದಿಂದಲೇ ಆರೋಗ್ಯದಲ್ಲಿ ಶಿಸ್ತು ಕಾಪಾಡಿಕೊಳ್ಳಬೇಕು ಹಾಗೂ ತನ್ನ ಪರಿಸರದ ಜನರಲ್ಲಿ ಹೃದಯ ಸಂಬಂಧೀ ಕಾಯಿಲೆಗಳ ಕುರಿತಾಗಿ ಜಾಗೃತಿ ಮೂಡಿಸಬೇಕು ಎಂದರು.



