ಜನ ಮನದ ನಾಡಿ ಮಿಡಿತ

Advertisement

ದನದ ಕರುವನ್ನ ಕೊಂದು ಮರದಲ್ಲಿ ನೇತಾಕಿದ ಚಿರತೆ…!!!

ಒಂದೆರಡು ವರ್ಷಗಳಿಂದ ಪುತ್ತೂರು ಮತ್ತು ಆಸುಪಾಸಿನ ನಾನಾ ಕಡೆ ಚಿರತೆ ಓಡಾಟದ ಹೆಜ್ಜೆಗುರುತುಗಳು ಗೋಚರವಾದ ನಡುವೆಯೇ, ಇದೇ ಮೊದಲ ಬಾರಿಗೆ ಚಿರತೆಯು ತನ್ನ ಬೇಟೆಯನ್ನು ಮರದ ಮೇಲಿಟ್ಟು ನಾಪತ್ತೆಯಾದ ಘಟನೆ ನಡೆದಿದೆ.

ಪುತ್ತೂರು ತಾಲೂಕಿನ ಕೆಯ್ಯೂರು ಮತ್ತು ಕೊಳ್ತಿಗೆ ಗ್ರಾಮ ವ್ಯಾಪ್ತಿಯ ಕಣಿಯಾರುಮಲೆ ರಕ್ಷಿತಾರಣ್ಯದ ಅರ್ತಿಯಡ್ಕ ಎಂಬಲ್ಲಿ ರಬ್ಬರ್ ಮರವೊಂದರ ಕೊಂಬೆಯಲ್ಲಿ ಸತ್ತ ದನದ ಕರುವಿನ ಕಳೇಬರ ನೇತಾಡುತ್ತಿರುವುದು ಪತ್ತೆಯಾಗಿದ್ದು, ಇದು ಚಿರತೆಯದ್ದೇ ಕೆಲಸ ಎಂದು ಅರಣ್ಯ ಇಲಾಖೆ ಖಚಿತಪಡಿಸಿರುವ ಕಾರಣ ಹಳ್ಳಿಯ ಗ್ರಾಮಸ್ಥರು ಮತ್ತು ರಬ್ಬರ್ ಟ್ಯಾಪರ್‌ಗಳಲ್ಲಿ ಆತಂಕ ಮನೆ ಮಾಡಿದೆ. ಮುಂಜಾನೆ ರಬ್ಬರ್ ಟ್ಯಾಪಿಂಗ್‌ಗೆ ಹೋದ ಕಾರ್ಮಿಕರು ತೋಟದ ಮಧ್ಯದ ರಬ್ಬರ್ ಮರವೊಂದರ ಮೇಲೆ ಸತ್ತ ದನದ ಕರು ನೇತಾಡು ತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಕರುವಿನ ರುಂಡವು ಮರದ ಕೊಂಬೆಯ ಮಧ್ಯೆ ಸಿಲುಕಿದ್ದು, ಕೆಳಗೆ ಬೀಳದಂತೆ ಆಧಾರವಾಗಿತ್ತು. ಸತ್ತ ಕರುವಿನ ದೇಹದ ಒಂದಷ್ಟು ಭಾಗವನ್ನು ಸೀಳಿ ಮಾಂಸ ಹೊರ ತೆಗೆದು ಚಿರತೆ ತಿಂದಿದೆ. ಉಳಿದ
ಕೊಂಬೆಯಲ್ಲಿ ನೇತು ಹಾಕಿ ಪರಾರಿಯಾಗಿದೆ.

Leave a Reply

Your email address will not be published. Required fields are marked *

ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..!

ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…!

ವಿ ಡಿ ಸತೀಶನ್ ಅವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು…!

ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ…!

ಬಂಟ್ವಾಳ: ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ (65) ಹೃದಯಾಘಾತದಿಂದ ನಿಧನ!

ಮಂಗಳೂರು: ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ!

ಮಂಗಳೂರು: ಪಚ್ಚನಾಡಿ ರೈಲ್ವೇ ಹಳಿಯಲ್ಲಿ ಯುವಕನ ಮೃ*ತದೇಹ ಪತ್ತೆ; ಸಂಶಯಾಸ್ಪದ ಸಾ*ವು..!

ಬಂಟ್ವಾಳ: ಪಾಣೆಮಂಗಳೂರು ಸಮೀಪ ನೇತ್ರಾವತಿ ನದಿಯಲ್ಲಿ ಮೃ*ತದೇಹ ಪ*ತ್ತೆ….!

ಮಂಗಳೂರು: ಸಂಹಿತೆಗಳ ಜಾರಿಯಿಂದ ಯೂನಿಯನ್ ಮುಕ್ತ ಭಾರತವಾಗುವ ಅಪಾಯವಿದೆ- ಫಣೀಂದ್ರ ಕೆ ಎಚ್ಚರ!

error: Content is protected !!