ಪಕ್ಷಿಕೆರೆ : ಕೆಮ್ರಾಲ್ ಗ್ರಾಮ ಪಂಚಾಯತ್ ಮುಲ್ಕಿ ತಾಲೂಕು ಹಾಗೂ ಪಶುಪಾಲನಾ ಇಲಾಖೆ ಪಶು ಚಿಕಿತ್ಸಾಲಯ ಹಳೆಯಂಗಡಿ ಇವರ ಸಹಯೋಗದಲ್ಲಿ ವಿಶ್ವ ರೇಬಿಸ್ ದಿನಾಚರಣೆ ಪ್ರಯುಕ್ತ ನಾಯಿಗಳಿಗೆ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮ ನಿನ್ನೆ ನಡೆಯಿತು.


ಪಂಚಾಯತ್ ಅಧ್ಯಕ್ಷರಾದ ಶ್ರೀ ಮಯ್ಯದಿ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಪಶುವೈದ್ಯಾಧಿಕಾರಿಗೆ ರೇಬಿಸ್ ಲಸಿಕಾ ಕಿಟ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಕಾಡು ಸಭಾಭವನ, ಅತ್ತೂರು ಕೋರ್ದಬ್ಬು ದೈವಸ್ಥಾನ ಬಳಿ, ಕೊಯಿಕುಡೆ ಹರಿಪಾದೆ ಜಾರಂದಾಯ ಯುವಕ ಮಂಡಲದ ಬಳಿ ಹಾಗೂ ಪಂಜ ಕೊಯಿಕುಡೆ ಹಾಲು ಉತ್ಪಾದಕರ ಸಂಘದ ಬಳಿ ಲಸಿಕಾ ಶಿಬಿರ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರು, ಸರ್ವಸದಸ್ಯರು, ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಎಸ್ಡಿಎಎ ಮತ್ತು ಸಿಬ್ಬಂದಿಗಳು ಹಾಗೂ ಪಶು ವೈದ್ಯಾಧಿಕಾರಿ ಹಾಗೂ ಪಶು ಪಾಲನಾ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.



