ನಾಯಿಯೊಂದು ಬಾಲಕನಿಗೆ ಮಾರಣಾಂತಿಕ ದಾಳಿ ನಡೆಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಹಳೆಕೋಟೆ ಬಳಿ ನಡೆದಿದೆ. ಉಳ್ಳಾಲ ಹಳೆಕೋಟೆಯ ಬಾಲಕ ಮನೆಗೆ ಹೋಗುತ್ತಿರುವಾಗ ಮಿಲ್ಲತ್ ನಗರ ಪ್ರದೇಶದಲ್ಲಿ ಬೀದಿನಾಯಿಯು ದಾಳಿ ನಡೆಸಿದೆ.

ಇದರಿಂದ ಗಂಭೀರ ಗಾಯಗೊಂಡ ಬಾಲಕನನ್ನು ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ ಬಳಿಕ ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.



