ಬಂಟ್ವಾಳ: ತುಂಬೆ ಡ್ಯಾಮ್ ಬಳಿ ಮೀನು ಹಿಡಿಯಲು ಹೋಗಿ ನದಿ ನೀರಿಗೆ ಬಿದ್ದು ಮೇಲಕ್ಕೆ ಬರುವುದಕ್ಕೆ ಒದ್ದಾಡಿ ಕೊನೆಗೆ ಡ್ಯಾಮ್ ಸಿಬಂದಿ ಹಾಗೂ ಬಂಟ್ವಾಳ ಅಗ್ನಿ ಶಾಮಕ ದಳದವರ ನೆರವಿನಿಂದ ಮೇಲಕ್ಕೆ ಬಂದ ಘಟನೆ ನಡೆದಿದೆ.

ಬೋಳಂತೂರು ನಿವಾಸಿ ರ‍್ಷಾದ್ ಅವರು ಅ. ೨ರಂದು ರಾತ್ರಿ ಮೀನು ಹಿಡಿಯಲು ಹೋಗಿ ನೀರಿಗೆ ಬಿದ್ದಿದ್ದಾರೆ. ಆದರೆ ಡ್ಯಾಮ್ ನಿಂದ ಸುಮಾರು 5 ಗೇಟ್ ಗಳಲ್ಲಿ ನೀರು ಹೊರಕ್ಕೆ ಹೋಗುತ್ತಿದ್ದು, ಹೀಗಾಗಿ ನೀರಿನ ರಭಸ ಹೆಚ್ಚಿದ್ದು ಮೇಲಕ್ಕೆ ಬರಲು ಎರಡು ಗಂಟೆಗಳ ಕಾಲ ಒದ್ದಾಡಬೇಕಿತು. ಆತನ ಬೊಬ್ಬೆ ಕೇಳಿ ಡ್ಯಾಮ್ ಸಿಬಂದಿ ರಕ್ಷಣೆಗೆ ಮುಂದಾಗಿದ್ದು, ಜೊತೆಗೆ ಪೊಲೀಸರು, ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೊನೆಗೆ ಆತನ ಹಗ್ಗದ ನೆರವಿನಿಂದ ಮೇಲಕ್ಕೆ ಬಂದಿದ್ದಾನೆ.



