ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾದ ಪಾಣೆಮಂಗಳೂರು ಉಕ್ಕಿನ ಸೇತುವೆಯ ಮಧ್ಯಭಾಗದಲ್ಲಿ ಸಣ್ಣದಾದ ಬಿರುಕು ಕಾಣಿಸಿಕೊಂಡಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸವಾರಿ ಮಾಡುವಂತೆ ಸ್ಥಳೀಯರು ತಿಳಿಸಿದ್ದಾರೆ.

ಅಕ್ಕರಂಗಡಿ ಅಂದರೆ ಪಾಣೆಮಂಗಳೂರು ರಸ್ತೆಯಲ್ಲಿ ಡಾಮರು ಎದ್ದು ಹೋಗಿದ್ದು, ಸಣ್ಣ ಗುಂಡಿಯಾಗಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ರಾತ್ರಿ ವೇಳೆಯಾಗಿರುವುದರಿಂದ ಇದರ ತೀವ್ರತೆ ಮತ್ತು ಸ್ಪಷ್ಟವಾದ ಚಿತ್ರಣ ಕಾಣುತ್ತಿಲ್ಲ.

ಈ ಹಿಂದೆ ಬಿ.ಸಿ.ರೋಡು ಕಡೆಯಿಂದ ಬರುವ ಭಾಗದಲ್ಲಿ ಸೇತುವೆ ಕುಸಿತ ಕಂಡು ಬಂದಿತ್ತು. ಹಾಗಾಗಿ ನೂತನ ಸೇತುವೆ ಆ ಸಂದರ್ಭದಲ್ಲಿ ನಿರ್ಮಾಣ ಮಾಡಲಾಗಿತ್ತು. ಪಾಣೆಮಂಗಳೂರು ಹಳೆಯ ಸೇತುವೆಯ ಅಡಿ ಭಾಗದಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯತ್ತಿದೆ ಎಂಬ ಆರೋಪಗಳು ಕೇಳುತ್ತಲೇ ಇವೆ.
ಇಲ್ಲಿ ಲೋಡ್ ಮಾಡಲಾದ ಮರಳು ಲಾರಿಗಳು ರಾತ್ರಿ ವೇಳೆ ಕದ್ದು ಮುಚ್ಚಿ ಓವರ್ ಲೋಡ್ ಹಾಕಿಕೊಂಡು ಹೋಗುತ್ತಿದ್ದು, ಇದೇ ಸೇತುವೆ ಬಿರುಕು ಕಾಣಿಸಿಕೊಳ್ಳಲು ಮುಳುವಾಯಿತಾ? ಎಂಬುವುದೇ ಸಾರ್ವಜನಿಕರ ಪ್ರಶ್ನೆಯಾಗಿದೆ.



