ಬಂಟ್ವಾಳ: ಬಂಟ್ವಾಳ ಹಾಗೂ ಉಳ್ಳಾಲ ತಾಲೂಕುಗಳ ಒಟ್ಟು 57 ಗ್ರಾ.ಪಂ.ಗಳ ಘನ ತ್ಯಾಜ್ಯಗಳನ್ನು ನಿರ್ವಹಿಸುವ ದೃಷ್ಟಿಯಿಂದ ನರಿಕೊಂಬು ಗ್ರಾ.ಪಂ.ವ್ಯಾಪ್ತಿಯ ಶಂಭೂರಿನಲ್ಲಿ 1.95 ಕೋ.ರೂ.ವೆಚ್ಚದಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣಾ ಘಟಕ(ಎಂಆರ್‌ಎಫ್) ಕಾಮಗಾರಿ ಪ್ರಗತಿಯಲ್ಲಿದೆ. ಘಟಕದ ಮೇಲ್ಛಾವಣಿ(ಟ್ರಸ್) ಕೆಲಸ ಪೂರ್ಣಗೊಂಡು ಯಂತ್ರೋಪಕರಣಗಳ ಜೋಡಣೆ ನಡೆಯಬೇಕಿದ್ದು, ಮುಂದಿನ ಎರಡೂವರೆ ತಿಂಗಳಲ್ಲಿ ಕೆಲಸ ಪೂರ್ಣಗೊಂಡು ಘಟಕ ಕಾರ್ಯಾಚರಣೆಯ ಹಂತಕ್ಕೆ ತಲುಪಲಿದೆ.
ಮಂಗಳೂರು ತಾಲೂಕಿನ ತೆಂಕಎಡಪದವು ಗ್ರಾಮದಲ್ಲಿ ಈಗಾಗಲೇ ದ.ಕ.ಜಿಲ್ಲೆಯ ಮೊದಲ ಎಂಆರ್‌ಎಫ್ ಘಟಕ ಕಾರ್ಯಾಚರಿಸುತ್ತಿದ್ದು, ಇದೀಗ ಜಿಲ್ಲೆಯ ಮತ್ತೆ ಮೂರು ಘಟಕಗಳ ಕಾಮಗಾರಿ ಪ್ರಗತಿಯಲ್ಲಿದೆ. ಬೆಳ್ತಂಗಡಿಯ ಉಜಿರೆ, ಪುತ್ತೂರಿನ ಕೆದಂಬಾಡಿ ಹಾಗೂ ಬಂಟ್ವಾಳದ ಶಂಭೂರಿನಲ್ಲಿ ಕಾಮಗಾರಿಗಳು ನಡೆಯುತ್ತಿದೆ.
ಗ್ರಾ.ಪಂ.ಗಳು ತಮ್ಮ ಸ್ವಚ್ಛವಾಹಿನಿ ವಾಹನಗಳ ಮೂಲಕ ತ್ಯಾಜ್ಯವನ್ನು ಸಂಗ್ರಹಿಸಿ ಅದನ್ನು ಸ್ವಚ್ಛ ಸಂಕೀರ್ಣ ತ್ಯಾಜ್ಯ ಘಟಕದಲ್ಲಿ ವಿಂಗಡನೆ ಮಾಡಿ ಚೀಲದಲ್ಲಿ ಶೇಖರಣೆ ಮಾಡುತ್ತದೆ. ಮುಂದೆ ರೂಟ್ ಮ್ಯಾಪ್ ಪ್ರಕಾರ ಎಂಆರ್‌ಎಫ್ ಘಟಕದ ವಾಹನ ಗ್ರಾ.ಪಂ.ಘಟಕಗಳಿಗೆ ತೆರಳಿ ಚೀಲಗಳನ್ನು ಸಂಗ್ರಹಣೆ ಮಾಡುವ ಕಾರ್ಯವನ್ನು ಮಾಡುತ್ತದೆ. ಬಳಿಕ ಎಂಆರ್‌ಎಫ್ ಘಟಕದಲ್ಲಿ ಯಂತ್ರಗಳ ಮೂಲಕ ಕಣವಾಗಿ ಪರಿವರ್ತಿಸಲಾಗುತ್ತದೆ. ಮುಂದೆ ಅದನ್ನು ವಿವಿಧ ವಿಭಾಗಗಳಲ್ಲಿ ಪ್ರತ್ಯೇಕಿಸಿ ಮರು ಉತ್ಪಾಸುವುದಕ್ಕೆ, ಸಿಮೆಂಟ್ ಉತ್ಪಾದನಾ ಘಟಕಗಳಿಗೆ ಇಂಧನವಾಗಿ ಮಾರಾಟ ಮಾಡಲಾಗುತ್ತದೆ. ಇಂತಹ ಘಟಕಗಳನ್ನು ಟೆಂಡರ್ ಮೂಲಕ ಆಸಕ್ತರಿಗೆ ವಹಿಸಲಾಗುತ್ತಿದ್ದು, ಘಟಕದಲ್ಲಿ 80 ಶೇ. ಉದ್ಯೋಗವನ್ನು ಸ್ಥಳೀಯ ಗ್ರಾ.ಪಂ.ಗಳ ನಿವಾಸಿಗಳಿಗೆ ನೀಡಲಾಗುತ್ತದೆ.
ಶಂಭೂರಿನ ಮುಂದೆಜೋರ ಪ್ರದೇಶದಲ್ಲಿ ಸ.ನಂ. 24/೧ಜಿರಲ್ಲಿ ಘಟಕಕ್ಕೆ 1 ಎಕರೆ ನಿವೇಶನವಿದ್ದು, ಸುಮಾರು 2 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಘಟಕ ಅನುಷ್ಠಾನಗೊಳ್ಳುತ್ತಿದೆ. ತೆಂಕ ಎಡಪದವಿನ ಘಟಕವು 10 ಟನ್ ತ್ಯಾಜ್ಯ ನಿರ್ವಹಣೆಯ ಸಾಮರ್ಥ್ಯವನ್ನು ಹೊಂದಿದ್ದರೆ, ಶಂಭೂರು ಸೇರಿದಂತೆ ಪ್ರಸ್ತುತ ನಿರ್ಮಾಣ ಹಂತದ ಮೂರು ಘಟಕಗಳನ್ನು ಕೂಡ ತಲಾ 7 ಟನ್ ಸಾಮರ್ಥ್ಯವನ್ನು ಹೊಂದಿದೆ. ಅಂದರೆ ದಿನನಿತ್ಯ 7 ಟನ್ ಒಣ ತ್ಯಾಜ್ಯವನ್ನು ವಿಂಗಡಿಸಿ ನಿರ್ವಹಣೆಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಬಂಟ್ವಾಳ ತಾಲೂಕಿನ 4೦ ಹಾಗೂ ಉಳ್ಳಾಲ ತಾಲೂಕಿನ 17 ಗ್ರಾ.ಪಂ.ಗಳು ಈ ಘಟಕದ ವ್ಯಾಪ್ತಿಗೆ ಬರಲಿದ್ದು, ಒಟ್ಟು 57 ಗ್ರಾ.ಪಂ.ಗಳ 99,520 ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳ ಒಣ ತ್ಯಾಜ್ಯವನ್ನು ನಿರ್ವಹಣೆ ಮಾಡಲಾಗುತ್ತದೆ.
ಶಂಭೂರಿನ ಘಟಕವು 1.95 ಕೋ.ರೂ. ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿದ್ದು, ಅದರಲ್ಲಿ 1.476.ಕೋ.ರೂ. ಸಿವಿಲ್ ಕೆಲಸವಾಗಿದ್ದು, 48.50ಲಕ್ಷ ರೂ. ಯಂತ್ರೋಪಕರಣಗಳ ಮೊತ್ತವಾಗಿರುತ್ತದೆ. ಇದಕ್ಕೆ 98 ಲಕ್ಷ ರೂ. ಗ್ರಾ.ಪಂ.ಗಳಿಂದ, 32 ಲಕ್ಷ ರೂ. ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ)ನಿಂದ, 35 ಲಕ್ಷ ರೂ. ತಾ.ಪಂ.ಅನುದಾನ ಹಾಗೂ 3೦ ಲಕ್ಷ ರೂ. ಜಿ.ಪಂ.ಅನುದಾನವನ್ನು ಬಳಸಿಕೊಳ್ಳಲಾಗಿದೆ.
ಗ್ರಾ.ಪಂ.ಗಳಿಂದ ತ್ಯಾಜ್ಯ ಸಂಗ್ರಹಕ್ಕಾಗಿ ವಾಹನದ ಅವಶ್ಯಕತೆ ಇದ್ದು, ಅದಕ್ಕಾಗಿ ಎಂಸಿಎಫ್‌ನಿಂದ 24 ಲಕ್ಷ ರೂ.ಗಳ ಸಿಎಸ್‌ಆರ್ ಅನುದಾನ ಬಳಸಿಕೊಳ್ಳಲಾಗುತ್ತಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಘಟಕದ ಅನುಷ್ಠಾನ ಕಾರ್ಯ ನಡೆಯುತ್ತಿದ್ದು, ಮುಂದೆ ಘಟಕದ ನಿರ್ವಹಣೆಗಾಗಿ ತಾಂತ್ರಿಕ ಮತ್ತು ಆಡಳಿತ ಸಮಿತಿಯನ್ನು ರಚಿಸಲಾಗಿದೆ ಎಂದು ಜಿ.ಪಂ.ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಇಂತಹ ಘಟಕಗಳು ಗ್ರಾ.ಪಂ.ಹಣ ಪಾವತಿಸಿ ಒಣ ತ್ಯಾಜ್ಯ ನೀಡುವುದು ಅಥವಾ ಘಟಕದ ನಿರ್ವಹಣಾ ಸಂಸ್ಥೆಯೇ ಹಣ ಪಾವತಿಸಿ ತ್ಯಾಜ್ಯವನ್ನು ಸಂಗ್ರಹ ಮಾಡುವ ಮೂಲಕ ನಡೆಯುತ್ತದೆ. ಆದರೆ ದ.ಕ.ಜಿ.ಪಂ.ರಾಜ್ಯದಲ್ಲೇ ಮೊದಲ ಬಾರಿಗೆ ಶುಲ್ಕ ರಹಿತ ಮಾದರಿ(ಝಿರೊ ರೂಪೀಸ್ ಮಾಡೆಲ್)ಯನ್ನು ಪರಿಚಯಿಸಿದ್ದು, ಇಲ್ಲಿ ಯಾರು ಕೂಡ ಪರಸ್ಪರ ಯಾರಿಗೂ ಮೊತ್ತ ಪಾವತಿಸುವ ವ್ಯವಸ್ಥೆಯಿಲ್ಲ. ಇದರಿಂದ ಗ್ರಾ.ಪಂ.ಗಳು ಆರ್ಥಿಕ ಹೊರೆಯಾಗದಂತೆ ಒಡಂಬಡಿಕೆಯ ರೀತಿ ಒಣ ತ್ಯಾಜ್ಯವನ್ನು ನೀಡಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…