ದಕ್ಷಿಣ ಕನ್ನಡ: ತುಳುವೆರೆ ಆಯನೊ ಕೂಟ, ತುಳು ವರ್ಲ್ಡ್, ಮಂದಾರ ಪ್ರತಿಷ್ಠಾನ ಸಹಯೋಗದೊಂದಿಗೆ ಯಕ್ಷಾರಾಧನಾ ಬಳಗ ಮಕ್ಕಳಿಂದ ಪ್ರಪ್ರಥಮ ಬಾರಿಗೆ ತುಳು ಸಂಪೂರ್ಣ ದೇವಿ ಮಹಾತ್ಮೆ “ಸಿರಿ ದೇವಿ ಮೈಮೆ” ಯಕ್ಷಗಾನ ಬಯಲಾಟ ನಡೆಸುವ ಬಗ್ಗೆ ಪೂರ್ವಭಾವಿ ಸಭೆ ಯಕ್ಷಾರಾಧನಾ ಬಳಗದ ಮುಖ್ಯಸ್ಥೆ ಪದ್ಮಶ್ರೀ ಭಟ್ ಹಾಗೂ ತುಳು ವರ್ಲ್ಡ್ ಮುಖ್ಯಸ್ಥ ರಾಜೇಶ್ ಆಳ್ವ ಬದಿಯಡ್ಕ ನೇತೃತ್ವದಲ್ಲಿ ನಡೆಯಿತು.

ಸಂಪೂರ್ಣ ದೇವಿ ಮಹಾತ್ಮೆ ತುಳು ಯಕ್ಷಗಾನಕ್ಕಾಗಿ ಸುಮಾರು 40 ಮಂದಿ ಮಕ್ಕಳನ್ನು ಈಗಾಗಲೇ ಆಯ್ಕೆ ಮಾಡಿದ್ದು, ತರಬೇತಿ ನೀಡಲು ಸಿದ್ಧತೆ ನಡೆದಿದೆ, ಯಕ್ಷಗಾನ ತರಬೇತುದಾರರಾದ ಶ್ರೀಕಾಂತ ರಾವ್ ಹಾಗೂ ಸ್ನೇಹಲತಾ ಇವರು, ಮಕ್ಕಳ ತರಬೇತಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿದ್ದು, ಕಾರ್ಯಕ್ರಮ ಸಂಪೂರ್ಣ ಯಶಸ್ಸಿಗೂ ಆಗುವ ನಿರೀಕ್ಷೆ ಇದೆ.
ಯಕ್ಷಗಾನ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಪತ್ರಕರ್ತ ಡಾಕ್ಟರ್ ಮಂದಾರ ರಾಜೇಶ್ ಭಟ್, ಲೋಕೇಶ್ ಏ.ಕೆ. ವಿಟ್ಲ, ಶ್ರೀಕಾಂತ ಭಟ್, ಸ್ನೇಹಲತಾ, ಸುಬ್ರಮಣ್ಯ ಭಟ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇತ್ತೀಚೆಗಷ್ಟೇ ತುಳುವೆರೆ ಆಯನೊ ಕೂಟ ವತಿಯಿಂದ ಸಂಪೂರ್ಣ ತುಳು ದೇವಿ ಮಹಾತ್ಮೆ ಪ್ರಪ್ರಥಮವಾಗಿ ಮಂಗಳೂರು ಪುರಭವನದಲ್ಲಿ ಯಶಸ್ವಿ ಪ್ರದರ್ಶನ ಕಂಡಿದ್ದು, ಈಗ ಮಕ್ಕಳಲ್ಲಿ ತುಳು ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿರುವುದು ಯಕ್ಷಗಾನ ಆಸಕ್ತರಿಗೆ ಹರುಷ ತಂದಿದೆ. ಮುಂದಿನ ದಿನಗಳಲ್ಲಿ ಕರಾವಳಿ ಕರ್ನಾಟಕದಾಧ್ಯಂತ ಯಕ್ಷಗಾನ ವಿಜೃಂಭಿಸಲಿ ಎಂಬುದು ಎಲ್ಲರ ಆಶಯ.



