ಮೂಡುಬಿದಿರೆ: ಇರುವೈಲು ಗ್ರಾಮದ ಹೊಸಮರಪದವು ನಿವಾಸಿ ದೇವಕಿ ಶೆಟ್ಟಿ ಹಾಗೂ ಅವರ ಮಗ ಸಂಜೀವ ಶೆಟ್ಟಿ ಇವರು ಅನಾರೋಗ್ಯ ಪೀಡಿತರಾಗಿ ಕಳೆದ ಮೂರು ದಿನಗಳಿಂದ ಸ್ವಂತ ದೈನಂದಿನ ಚಟುವಟಿಕೆಯನ್ನೂ ಮಾಡಲಾಗದೆ ಮಲಗಿದ್ದಲ್ಲೇ ಎಲ್ಲವನ್ನೂ ಮಾಡಿಕೊಳ್ಳುವ ದುಸ್ಥಿತಿಯಲ್ಲಿದ್ದಾರೆ.

ಇವರ ಸಂಕಷ್ಟವನ್ನು ಕಂಡು ನೆರೆಹೊರೆಯವರು ಗ್ರಾಮ ಪಂಚಾಯತಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿಗೆ ಕೂಡಲೇ ಸ್ಪಂದಿಸಿದ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೇಖರ್, ಮಾಜಿ ಅಧ್ಯಕ್ಷ ರಾದ ವಲೇರಿಯನ್ ಕುಟಿನ್ನ ಹಾಗೂ ಸದಸ್ಯರಾದ ನವೀನ್ ಪೂಜಾರಿಯವರು, ಮೂಡುಬಿದಿರೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದ ಸಹಕಾರದೊಂದಿಗೆ ದೇವಕಿ ಶೆಟ್ಟಿರವರನ್ನು ಮೂಡಬಿದಿರೆಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಅವರ ಮಗ ಸಂಜೀವ ಶೆಟ್ಟಿರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ



