ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಖ್ಯಾತ ಚಿತ್ರನಟಿ ಪ್ರೇಮಾ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದೇವಳದ ವತಿಯಿಂದ ಕಮಲಾದೇವಿ ಪ್ರಸಾದ್ ಆಸ್ರಣ್ಣ ಅವರು ನಟಿ ಪ್ರೇಮ ಅವರಿಗೆ ದೇವರ ಶೇಷ ವಸ್ತçವನ್ನು ಪ್ರಸಾದದ ರೂಪದಲ್ಲಿ ನೀಡಿದ್ದಾರೆ. ಇನ್ನೂ ಆನೆಯ ಜೊತೆ ಸ್ವಲ್ಪ ಹೊತ್ತು ಕಳೆದ ಪ್ರೇಮರವರು, ಆನೆ ದೇವರಿಗೆ ನಮಸ್ಕಾರ ಮಾಡುವುದನ್ನು ಕಂಡು ಖಷಿ ಪಟ್ಟಿದ್ದಾರೆ.




