ಬಜರಂಗದಳ ಕರ್ನಾಟಕ ವತಿಯಿಂದ ಮಂಗಳೂರಿನಿ0ದ ಉಡುಪಿಗೆ ಹೊರಡುವ ಶೌರ್ಯ ಜಾಗರಣ ರಥಯಾತ್ರೆಯನ್ನು ಸ್ವಾಗತಿಸಲಾಯಿತು.

ಮುಲ್ಕಿ ಬಸ್ಸು ನಿಲ್ದಾಣದಲ್ಲಿ ಸುನಿಲ್ ಆಳ್ವಾ ನೇತ್ರತ್ವದಲ್ಲಿ ಭಾರತಮಾತೆಗೆ ಪುಷ್ಪವೃಷ್ಠಿಯ ಮೂಲಕ ಬರಮಾಡಿಕೊಳ್ಳಲಾಯಿತು. ಹಿರಿಯ ಪತ್ರಿಕಾ ವಿತರಕ ರಮಾನಾಥ ಶೆಣೈ ಕಾಯಿ ಒಡೆಯುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. ಬಳಿಕ ಯಾತ್ರೆಯು ಬಪ್ಪನಾಡು ದೇವಸ್ಥಾನಕ್ಕೆ ತೆರಳಿದೆ. ಇನ್ನೂ ಈ ಈ ಸಂದರ್ಭದಲ್ಲಿ ಹರ್ಷರಾಜ ಶೆಟ್ಟಿ ಜಿಎಂ, ದಯಾವತಿ ಅರುಣ್ ಅಂಚನ್, ಶೈಲೇಶ್ ಕುಮಾರ್, ವಿವಿಧ ಸಂಘಟನೆ ಮುಖಂಡರಾದ ನವೀನ್ ಮೂಲ್ಕಿ, ರಮಾನಾಥ ಪೈ ಶ್ಯಾಮ್ ಪ್ರಸಾದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.



