ಬಂಟ್ವಾಳ; ನಿನ್ನೆ ಸುರಿದ ಸಿಡಿಲು ಮಿಂಚು ಸಹಿತ ಬಿರುಗಾಳಿ ಮಳೆಗೆ ತಾಲೂಕಿನ ಎರಡು ಮನೆಗಳಿಗೆ ಹಾನಿಯಾಗಿದೆ.

ಬಂಟ್ವಾಳ ತಾಲೂಕು ಬಡಗ ಕಜೆಕಾರು ಗ್ರಾಮದ ಕೆಡಿಮೇಲೂ ಮನೆ ನಿವಾಸಿ ನೊಣಯ್ಯರವರ ವಾಸ್ತವ್ಯದ ಮನೆಗೆ ಸಿಡಿಲು ಬಡಿದು ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ.

ಅಂತೆಯೇ ನಾವೂರು ಗ್ರಾಮದ ಅಂಬೇಡ್ಕರ್ ಕಾಲನಿ ಎಂಬಲ್ಲಿ ಭಾರತಿ ಎಂಬವರ ಮನೆಗೆ ಸಿಡಿಲು ಬಡಿದು ಭಾಗಶಃ ತೊಂದರೆಯುAಟಾಗಿದೆ. ಇನ್ನೂ ಸಿಡಿಲು ಸಹಿತ ಬಾರಿ ಮಳೆಗೆ ಅನೇಕ ಕಡೆಗಳಲ್ಲಿ ಅನಾಹುತ ಸಂಭವಿದ್ದು, ಸಂಬAಧಪಟ್ಟ ಅಧಿಕಾರಿಗಳು ಪ್ರಾಕೃತಿಕ ವಿಕೋಪದಡಿ ಪರಿಹಾರ ಧನವನ್ನು ನೀಡಬೇಕಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.



