ಜನ ಮನದ ನಾಡಿ ಮಿಡಿತ

Advertisement

“ಕುದ್ರು ಚಿತ್ರ” ರಿಲೀಸ್‌; ಭಾರತ್ ಸಿನಿಮಾಸ್‌ನಲ್ಲಿ ಭರ್ಜರಿ ಪ್ರದರ್ಶನ

ಮಂಗಳೂರು; ಕರಾವಳಿಯಲ್ಲಿ ಸೆನ್ಸೆಷನಲ್ ಮೂಡಿಸಿದ್ದ, ಮೋಕ್ಷ ಕ್ರಿಯೇಷನ್ಸ್ ಬ್ಯಾನರ್‌ನಡಿ, ಭಾಸ್ಕರ್ ನಾಯ್ಕ್ ರಚಿಸಿ ನಿರ್ದೇಶಿಸಿ, ನಿರ್ಮಿಸಿರುವ, ಕರಾವಳಿ ಭಾಗದ ಕಥಾಹಂದರ ಹೊಂದಿರುವ “ಕುದ್ರು” ಚಿತ್ರ ಇಂದು ಕರ್ನಾಟಕದಾದ್ಯಂತ ಅದ್ದೂರಿಯಾಗಿ ಬಿಡುಗಡೆಗೊಂಡಿದೆ.

ಈಗಾಗಲೇ ವಿಭಿನ್ನ ಟೈಟಲ್ ಮೂಲಕ ಸಿನಿಪ್ರಿಯರ ಮನಗೆದ್ದ ಕುದ್ರು ಸಿನಿಮಾದ ಬಿಡುಗಡೆಗೆ ಭಾರತ್ ಸಿನಿಮಾಸ್‌ನಲ್ಲಿ ಇಂದು ತೆಲಿಕೆದ ಬೊಳ್ಳಿ ದೇವ್‌ದಾಸ್ ಕಾಪಿಕಾಡ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ರು. ಬಳಿಕ ಮಾತಾನಾಡಿದ ಇವರು, ಸೌದಿಅರೇಬಿಯಾದಲ್ಲಿ ಕುದ್ರು ಸಿನಿಮಾದ ಶೂಟಿಂಗ್ ನಡೆದಿರುವುದು ತುಳುಚಿತ್ರರಂಗಕ್ಕೆ ಹೆಮ್ಮೆಯ ವಿಚಾರವಾಗಿದೆ. ಹಾಗೇನೆ ನೈಜ ಕಥೆಯನ್ನು ಒಳಗೊಂಡ ‘ಕುದ್ರು ಚಿತ್ರ ಗೆಲ್ಲಲ್ಲಿ ಎಂದು ಶುಭಹಾರೈಸಿದ್ದಾರೆ.

ಇದೇ ವೇಳೆ ಚಿತ್ರದ ನಿರ್ದೇಶಕ ಭಾಸ್ಕರ್‌ನಾಯ್ಕ್ ಮಾತಾನಾಡಿ, ಈಗಾಗಲೇ ಚಿತ್ರದ ಪ್ರಿಮಿಯರ್ ಶೋ ಎಲ್ಲೆಡೆ ಸಾಕಷ್ಟು ಪ್ರಶಂಸೆ ಪಡೆದಿದೆ.

ಇದೀಗ ಚಿತ್ರ ರಿಲೀಸ್ ಆಗಿದ್ದು, ತುಳು ಚಿತ್ರದಲ್ಲಿ ಕಾಮಿಡಿ ಇರತ್ತೆ ಆದರೆ ಈ ಚಿತ್ರದಲ್ಲಿ ಸ್ವಲ್ಪ ಬದಾಲಾವಣೆ ಮಾಡಲಾಗಿದೆ. ಇದನ್ನ ಜನರು ಇಷ್ಟಪಡುತ್ತಾರೆ ಎಂಬ ಭರವಸೆ ಇದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಅಂತೆಯೇ ವಿಶ್ವವಿದ್ಯಾನಿಲಯ ಕಾಲೇಜಿನ ಫ್ರೊಫೆಸರ್ ಲಕ್ಷ್ಮಣ,, ಹಾಗೂ ನಿರ್ದೇಶಕರ ಆಪ್ತರಾದ ಪ್ರವೀಣ್‌ರವರು ಕುದ್ರು ಚಿತ್ರದ ಯಶಸ್ಸಿಗೆ ಶುಭಹಾರೈಸಿದ್ದಾರೆ. ಇನ್ನೂ ಚಿತ್ರದ ನಾಯಕ ನಟ ಹರ್ಷಿತ್ ಶೆಟ್ಟಿ ಹಾಗೂ ನಾಯಕ ನಟಿ ಪ್ರಿಯಾ ಹೆಗ್ಡೆ ಚಿತ್ರದಲ್ಲಿ ಅಭಿನಯಿಸಿದ ಅನುಭವವನ್ನು ಹಂಚಿಕೊAಡಿದ್ದಾರೆ. ಕರಾವಳಿಯ ವಿಭಿನ್ನ ಕಥಾಹಂದರವನ್ನು ಒಳಗೊಂಡ ಈ ಕುದ್ರು ಚಿತ್ರ ಸಿನಿಪ್ರಿಯರ ಮನಗೆದ್ದು, ಸಕ್ಸಸ್ ಕಾಣಲಿ ಅನ್ನೋದು ನಮ್ಮ ಆಶಯ.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!