ಜನ ಮನದ ನಾಡಿ ಮಿಡಿತ

Advertisement

ತ್ರಿರಂಗ ಸಂಗಮ ಮುಂಬಯಿ ಪ್ರಥಮ ವರ್ಷದ ವಾರ್ಷಿಕೋತ್ಸವ ಮತ್ತು ಯಶಸ್ವಿ ಸಂಘಟಕ ಕರ್ನೂರು ಮೋಹನ್ ರೈ ಯವರ ಗಲ್ಫ್ ರಾಷ್ಟ್ರದ 50 ನೇ ಕಾರ್ಯಕ್ರಮ “ತ್ರಿ ರಂಗ ಮೋಹನ ಸುವರ್ಣ ಸಂಭ್ರಮ”

ತ್ರಿರಂಗ ಸಂಗಮ ಮುಂಬಯಿ ಪ್ರಥಮ ವರ್ಷದ ವಾರ್ಷಿಕೋತ್ಸವ ಮತ್ತು ಯಶಸ್ವಿ ಸಂಘಟಕ ಕರ್ನೂರು ಮೋಹನ್ ರೈ ಯವರ ಗಲ್ಫ್ ರಾಷ್ಟ್ರದ 50 ನೇ ಕಾರ್ಯಕ್ರಮ “ತ್ರಿ ರಂಗ ಮೋಹನ ಸುವರ್ಣ ಸಂಭ್ರಮ” ಕಾರ್ಯಕ್ರಮವು ಅಕ್ಟೋಬರ್ 8 ರಂದು ದುಬೈನಲ್ಲಿ ಯಶಸ್ವಿಯಾಗಿ ಜರುಗಿತು.

ದುಬೈಯ ಎಮಿರೇಟ್ಸ್‌ ಸ್ಕೂಲ್ ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುಎಇಯ ತುಳು ಕನ್ನಡಿಗರು ಮತ್ತು ಮಹಾರಾಷ್ಟ್ರದ ರಾಜ್ಯದಿಂದ ತುಳು ಕನ್ನಡಿಗರು ಉಪಸ್ಥಿತರಿದ್ದರು.

ಮುಂಬಯಿ ಬಂಟರ ಸಂಘದ ಮಾಜಿ‌ ಅಧ್ಯಕ್ಷರಾದ ಬಿ.ವಿವೇಕ್ ಶೆಟ್ಟಿಯವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಭವಾನಿ ಶಿಪ್ಪಿಂಗ್ ನ ಸಿ ಎಮ್ ಡಿ ಕೆ ಡಿ ಶೆಟ್ಟಿಯವರು ಮುಖ್ಯ ಅತಿಥಿಯಾಗಿದ್ದರು. ಮುಂಬಯಿಯ ಪ್ರಸಿದ್ದ ಜ್ಯೋತಿಷಿ ಅಶೋಕ್ ಪುರೋಹಿತ್ ಆಶೀರ್ವಚನವಿತ್ತರು. ಎಮ್ ಸಿ ಎ ಯ ಮಾಜಿ ಜೊತೆ ಕಾರ್ಯದರ್ಶಿ ಡಾ.ಪಿ ವಿ ಶೆಟ್ಟಿ,ಯುಎಇ ಬಂಟ್ಸ್ ನ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಫಾರ್ಚೂನ್ ಗ್ರೂಪ್ ಆಫ್ ಹೋಟೇಲ್ಸ್ ನ ಮಾಲಿಕರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ,ಯುಎಇಯ ಉದ್ಯಮಿಗಳಾದ ಹರೀಶ್ ಶೇರಿಗಾರ್ ,ಹರೀಶ್ ಬಂಗೆರ,ಮಹಾರಾಷ್ಟ್ರದ ಉದ್ಯಮಿಗಳಾದ , ರತ್ನಾಕರ ಶೆಟ್ಟಿ ಮುಂಡ್ಕೂರು, ಮಹೇಶ್ ಎಸ್ ಶೆಟ್ಟಿ, ಪ್ರವೀಣ್ ಬೋಜ ಶೆಟ್ಟಿ, ಹರೀಶ್ ಶೆಟ್ಟಿ ಎರ್ಮಾಲ್, ರವೀಂದ್ರನಾಥ ಭಂಡಾರಿ, ಸುನೀಲ್ ಶೆಟ್ಟಿ, ರಾದಕೃಷ್ಣ ಶೆಟ್ಟಿ,ಶಂಕರ ಶೆಟ್ಟಿ, ಸಂಜೀವ ಶೆಟ್ಟಿಯವರು ಉದ್ಘಟನೆಗೆ ಸಾಥ್ ನೀಡಿದರು.ಯಕ್ಷಧ್ರುವ ಪಟ್ಲ ಫೌಂಡೇಷನ್ ನ ಸಂಸ್ಥಾಪಕರಾದ ಪಟ್ಲ ಸತೀಶ್ ಶೆಟ್ಟಿ ಪ್ರಾರ್ಥನೆ ಗೀತೆ ಹಾಡಿದ್ದರು.

ಐದು ಗಂಟೆಗಳ ಕಾಲ ನಡೆದ ತ್ರಿ-ರಂಗ ಸುವರ್ಣ ಮೋಹನ ಸಂಭ್ರಮ ಕಾರ್ಯಕ್ರಮದಲ್ಲಿ ಯುಎಇಯ ಪ್ರಸಿದ್ಧ ನೃತ್ಯ ತಂಡಗಳ ವತಿಯಿಂದ ನೃತ್ಯ ಸಂಭ್ರಮ,ಯುಎಇಯ ಪ್ರಖ್ಯಾತ ಗಾಯಕ ಗಾಯಕಿಯರಿಂದ ಗಾನ ಸಂಭ್ರಮ,ಗೀತ ಸಾಹಿತ್ಯ ಖ್ಯಾತಿಯ ಕಲಡ್ಕ ವಿಠಲ ನಾಯಕ್ ಇವರಿಂದ ಹಾಸ್ಯ ಸಂಭ್ರಮ ಮತ್ತು ಯಕ್ಷ ದ್ರುವ ಪಟ್ಲ ಸತೀಶ್ ಶೆಟ್ಟಿಯವರ ಹೊಸ ಕಲ್ಪನೆಯೊಂದಿಗೆ ಯಕ್ಷ ಸಂಭ್ರಮ‌ -ರಾಧಾಕೃಷ್ಣ ವಿಲಾಸ ಜರುಗಿತು

.ಯಕ್ಷ ಸಂಭ್ರಮ ಕಾರ್ಯಕ್ರಮದಲ್ಲಿ ಹಿಮ್ಮೆಳ ವಾದಕರಾಗಿ ಪಟ್ಲ ಸತೀಶ್ ಶೆಟ್ಟಿ, ಧರ್ಮಸ್ಥಳ ಮೇಳದ ಸರಪಾಡಿ ಚಂದ್ರಶೇಖರ, ಮಯುರ್ ನಾಯ್ಕ್, ಶರತ್ ಕುಡ್ಲ ಮುಮ್ಮೆಳದಲ್ಲಿ ಕು.ನಿಹಾರಿಕ ಭಟ್, ಕು.ವಿಂಧ್ಯಾ ಆಚಾರ್ಯ ಭಾಗವಹಿಸಿದರು.

ಚಿಕ್ಕದಾಗಿ ಮತ್ತು ಚೊಕ್ಕದಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷರು ಮತ್ತು ಮುಂಬಯಿ ಬಂಟರ ಸಂಘದ ಪ್ರಗತಿಗೆ ಮೂಲ ಕಾರಣಕರ್ತರಾದ ಬಿ.ವಿವೇಕ್ ಶೆಟ್ಟಿಯವರನ್ನು ಗಣ್ಯತಿ ಗಣ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಸನ್ಮಾನದ ಮೂಲಕ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ತ್ರಿರಂಗದ ಕಾರ್ಯ ವೈಖರಿಯನ್ನು ಕಳೆದ ಒಂದು ವರ್ಷದಿಂದ ನೋಡುತ್ತ ಬಂದಿದ್ದೆನೆ.ಮುಂಬಯಿಯ ನಗರದಲ್ಲಿ ಒಳ್ಳೆ ಒಳ್ಳೆಯ ಕಾರ್ಯಕ್ರಮ ನೀಡುತ್ತ ಬಂದಿದ್ದರೆ.ಇಂತಹ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಈ ದುಬೈಯ ನಗರದಲ್ಲಿ ಮಾಡಿದ ಈ ಸಂಸ್ಥೆಯ ತ್ರಿಮೂರ್ತಿಗಳಾದ ಕರ್ನೂರು ಮೋಹನ್ ರೈ ,ಅಶೋಕ್ ಪಕಳ,ನವೀನ್ ಶೆಟ್ಟಿ ಇನ್ನ ಬಾಳಿಕೆಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ ಗಾಯಕ ಗಾಯಕಿಯರು,ನೃತ್ಯ ತಂಡದವರಿಗೆ,ಊರಿಂದ ಆಗಮಿಸಿದ ಹಾಸ್ಯ ಕಾರ್ಯಕ್ರಮದ ಕಲ್ಲಡ್ಕ ವಿಠಲ ನಾಯಕ್,ಪಟ್ಲ ಸತೀಶ್ ಶೆಟ್ಟಿ,ಕು.ವಿಂದ್ಯಾ ಆಚಾರ್ಯ,ಕು.ನಿಹಾರಿಕ ಭಟ್,ಸರಪಾಡಿ ಚಂದ್ರಶೇಖರ ಮತ್ತು ಮಯುರ್ ನಾಯ್ಕ್ ಇವರನ್ನು ಗೌರವಿಸಲಾಯಿತು.

ತ್ರಿರಂಗ ಸುವರ್ಣ ಮೋಹನ ಸಂಭ್ರಮ ಕಾರ್ಯಕ್ರಮವನ್ನು ವೀಕ್ಷಿಸಲು ಮಹಾರಾಷ್ಟ್ರ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ 85 ಕ್ಕೂ ಅಧಿಕ ಉದ್ಯೋಗಿ ಉದ್ಯಮಿಗಳಿಗೆ ವಿಶೇಷ ರೀತಿಯಲ್ಲಿ ಗೌರವಿಸಲಾಯಿತು, ದುಬೈಯ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಎಲ್ಲಾ ರೀತಿಯ ಪ್ರಾಯೋಜಕರಿಗೆ, ಮತ್ತು ಮಾಧ್ಯಮದವರಿಗೆ ಗೌರವಿಸಲಾಯಿತು. ಕರ್ನೂರು ಮೋಹನ್ ರೈ,ಅಶೋಕ್ ಪಕಳ,ನವೀನ್ ಶೆಟ್ಟಿ ಇನ್ನ ಬಾಳಿಕೆಯವರ ತ್ರಿರಂಗ ಸಂಗಮ ಮುಂಬಯಿ ಸಂಸ್ಥೆತ್ರಿರಂಗದ ವಾರ್ಷಿಕೋತ್ಸವದ ಯಶಸ್ವಿಗೆ ದುಬೈನಲ್ಲಿ ದುಡಿದ ಜಯಂತ್ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ಸುಗಂದರಾಜ್ ಬೇಕಲ್ ರವನ್ನು ಗೌರವಿಸಲಾಯಿತು.

ಯುಎಇಯ ಯುವ ನಿರೂಪಕಿ ಕು.ದೀಕ್ಷ ರೈಯವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಮತ್ತು ಸಭಾ ಕಾರ್ಯಕ್ರಮವನ್ನು ಅಶೋಕ್ ಪಕ್ಕಳ ಮತ್ತು ಕರ್ನೂರು ಮೋಹನ್ ರೈ ನಿರೂಪಿಸಿದರು. ನವೀನ್ ಶೆಟ್ಟಿ ಇನ್ನ ಬಾಳಿಕೆ ಧನ್ಯವಾದವಿತ್ತರು.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!