ಅಖಿಲ ಭಾರತ ದಿಗಂಬರ ಜೈನ ಜೈಸ್ವಾಲ್ ಸಮಾಜ & NCR ಸಹಯೋಗದಲ್ಲಿ ದೆಹಲಿಯ ಸಿರಿಫೋರ್ಟ್ ಆಡಿಟೋರಿಯಂನಲ್ಲಿ ಅಕ್ಟೋಬರ್ 8ರಂದು ಜರಗಿದ ‘ಪ್ರತಿಭಾ ಸನ್ಮಾನ ಸಮಾರಂಭ 2023 & ಕ್ಷಮಾವಾಣಿ ಮಹೋತ್ಸವ’ ದಲ್ಲಿ ಕರ್ನಾಟಕದ ಮೂಡುಬಿದಿರೆಯ ಪ್ರಥಮ್ ಮಾರೂರುಗೆ ಬೆಳ್ಳಿ ಪದಕದೊಂದಿಗೆ “ಪ್ರತಿಭಾ ಸಮ್ಮಾನ್ 2023” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಷ್ಟ್ರ ಮಟ್ಟದ ವೇದಿಕೆಯಲ್ಲಿ ಯಕ್ಷನಾಟ್ಯ ಪ್ರತಿಭಾ ಪ್ರದರ್ಶನ ನೀಡಿ ಪ್ರಶಂಸೆಗೆ ಪಾತ್ರನಾಗಿರುತ್ತಾನೆ. ಈತ ಮೂಡುಬಿದಿರೆಯ ಜೈನ ಪ್ರೌಢ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಶ್ರೀ ಯಕ್ಷನಿಧಿ (ರಿ) ಯಕ್ಷಗಾನ ಶಿಕ್ಷಣ ಸಂಸ್ಥೆಯ ಶ್ರೀ ಶಿವಕುಮಾರ್ ಮೂಡುಬಿದಿರೆಯವರ ಶಿಷ್ಯನಾಗಿದ್ದು, ಮಾರೂರಿನ ಪಾರ್ಶ್ವನಾಥ- ದೀಪಶ್ರೀ ದಂಪತಿಗಳ ಪುತ್ರನಾಗಿರುತ್ತಾನೆ.






