ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿ ವತಿಯಿಂದ ಭಾನುವಾರದಂದು ಸಂಜೆ ಗಂಟೆ 4.00 ಕ್ಕೆ ಯುವಕ ಮಂಡಲದ ಸಭಾಂಗಣದಲ್ಲಿ ಕಿಶೋರ – ಕಿಶೋರಿ ಸಂಘದ ವಿದ್ಯಾರ್ಥಿಗಳ ಸಮುಖದಲ್ಲಿ ಡಾ ||ಎ.ಪಿ.ಜೆ. ಅಬ್ದುಲ್ ಕಲಾಂ ರ ಹುಟ್ಟು ಹಬ್ಬವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗೋವಿಂದಾಸ್ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಅಕ್ಷತಾ ನವೀನ್ ಶೆಟ್ಟಿಯವರು ಎಪಿಜೆ ಅಬ್ದುಲ್ ಕಲಾಂರವರ ಸಾಧನೆಯ ಬಗ್ಗೆ ಮಾಹಿತಿ ನೀಡಿದರು. ಹಾಗೆ ಸಭೆಯಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ನಾಗೇಶ್ ಟಿ ಜಿ, ಯುವತಿ ಮಂಡಲದ ಪ್ರಧಾನ ಕಾರ್ಯದರ್ಶಿ ಕುಮಾರಿ ದಿವ್ಯಶ್ರೀ ಕೋಟ್ಯಾನ್, ಕೋಶಾಧಿಕಾರಿ ಕುಮಾರಿ ನಿರ್ಮಿತಾ ಹಾಗೂ ಯುವಕ ಯುವತಿ ಮಂಡಲದ ಸದಸ್ಯರು ಉಪಸ್ಥಿತರಿದ್ದರು.







