ಜನ ಮನದ ನಾಡಿ ಮಿಡಿತ

Advertisement

ಉಡಾ ಬೇಟೆಯಾಡಿ ಫೋಟೊಗಳಿಗೆ ಪೋಸ್ ಕೊಟ್ಟವ ಈಗ ಪೋಲೀಸರ ಅತಿಥಿ!!!

ಬಂಟ್ವಾಳ: ಭಾರತದ ಅಪರೂಪದ ವನ್ಯ ಜೀವಿಗಳಲ್ಲಿ ಒಂದಾದ ಉಡಾ (indian monitor lizard) ವನ್ನು ವ್ಯಕ್ತಿಯೋರ್ವ ಬೇಟೆಯಾಡಿ ಬಳಿಕ ಅದನ್ನು ಫೋಟೊಗಳಿಗೆ ಪೋಸ್ ನೀಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ವಗ್ಗದಲ್ಲಿ ಬೆಳಕಿಗೆ ಬಂದಿದೆ. ಉಡಾವನ್ನು ಸಾಯಿಸಿದ ವ್ಯಕ್ತಿಯನ್ನು ವಗ್ಗದ ಸುಧಾಕರ ಎಂದು ಗುರುತ್ತಿಸಲಾಗಿದ್ದು ಆತನ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯಿದೆ 1972 ಅನ್ವಯ ಕೇಸ್ ದಾಖಲು ಮಾಡಿದ್ದಾರೆ.

ಅಕ್ಟೋಬರ್ 11 ರಂದು ಘಟನೆ ಬೆಳಕಿಗೆ ಬಂದಿದ್ದು ಬೃಹತ್ ಗಾತ್ರದ ಉಡವನ್ನು ಹಿಂಸಾತ್ಮಕ ರೀತಿಯನ್ನು ಸಾಯಿಸಿ ಬಳಿಕ ಅದನ್ನು ತೆಗೆದುಕೊಂಡು ವಿಜ್ರಂಭಿಸುತ್ತಿದ್ದ ಎಂದು ಸ್ಥಳಿಯರು ಮಾಹಿತಿ ನೀಡಿದ್ದು ಜೊತೆಗೆ ಸಾಮಾಜಿಕ ಜಾಲಾ ತಾಣಗಳಲ್ಲಿ ಅದನ್ನು ಹರಿಯ ಬಿಟ್ಟಿದ್ದ. ದೂರು ದಾಖಲಾಗುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದು, ಬಂಟ್ವಾಳ ವಲಯ ಅರಣ್ಯಾಧಿಕಾರಿಯವರು ಪ್ರಕರಣದ ತನಿಖೆ ನಡಸುತ್ತಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಅಂಥೋಣಿ ಎಸ್‌. ಮರಿಯಪ್ಪ ಮಾಹಿತಿ ನೀಡಿದ್ದಾರೆ.

ಉಡಾ ಸಾಯಿಸಿದ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದ್ದು, ಆರೋಪಿ ಸುಧಾಕರ್ ತಲೆ ಮರೆಸಿಕೊಂಡಿದ್ದಾನೆ. ಆತ ಉಡಾ ಸಾಯಿಸಿ ಶೇರ್ ಮಾಡಿದ ಸಾಮಾಜಿಕ ಜಾಲಾತಾಣ ವಾಟ್ಸ್‌ಅಪ್ ಎಡ್ಮಿನ್ ನನ್ನು ವಿಚಾರಣೆ ಕರೆಸಿ ತನಿಖೆ ನಡಸಿದ್ದು ಆತನ ಸಿಡಿಆರ್‌ ಪರಿಶೀಲನೆ ನಢೆಸುತ್ತಿದ್ದು ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದಿದ್ದಾರೆ.
ಚರ್ಮಾ, ಮೂಳೆಗಳಿಗಾಗಿ ಬೇಟೆಗಾರರ ವಕ್ರ ದೃಷ್ಟಿಗೆ ಬಿದ್ದಿರುವ ಉಡಾ ಅವನತಿಯ ಹಾದಿಯಲ್ಲಿದ್ದು ಇದನ್ನು (ಪ್ರವರ್ಗ A)ಯನ್ನುಅಳಿವಿನ ಅಂಚಿನಲ್ಲಿರುವ ಅಪರೂಪದ ಸರೀಸೃಪ ಎಂದು ಘೋಷಣೆ ಮಾಡಲಾಗಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!