ದಕ್ಷಿಣ ಕನ್ನಡ :ಮೂಡುಬಿದಿರೆ ಪ್ರೆಸ್ ಕ್ಲಬ್ ಇದರ ನಿಕಟಪೂರ್ವ ಅಧ್ಯಕ್ಷ, ಜಯಕಿರಣ ಪತ್ರಿಕೆಯ ಮೂಡುಬಿದಿರೆ ತಾಲೂಕು ವರದಿಗಾರ ಹಾಗೂ ಯುವ ನ್ಯಾಯವಾದಿ ವೇಣುಗೋಪಾಲ (30) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಪತ್ರಕರ್ತರಾಗಿದ್ದ ಅವರು ನ್ಯಾಯವಾದಿಯಾಗಿ ಮೂಡುಬಿದರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದರು,
ಮೂಡಬಿದ್ರೆಯಲ್ಲಿ ಪತ್ರಿಕಾ ಭವನದ ಕನಸು ಕಂಡಿದ್ದ ವೇಣುಗೋಪಾಲ್ ಇವರು, ಸತತ ಪ್ರಯತ್ನದಿಂದ ಶಾಸಕರ ಮುಖಾಂತರ ಸ್ವಂತ ಸ್ಥಳ ದೊರಕಿಸಿದ್ದು, ವೇಣುಗೋಪಾಲ್ ಅಧ್ಯಕ್ಷರಾಗಿದ್ದಾಗ ಅಂದಿನ ಮುಖ್ಯಮಂತ್ರಿಗಳಿಂದ ಶಿಲನ್ಯಾಸವನ್ನು ನೆರವೇರಿಸಿದ್ದು, ಪತ್ರಿಕಾ ಭವನದ ಕೆಲಸ ಪ್ರಗತಿಯಲ್ಲಿದೆ.

ಪತ್ರಿಕಾ ಕ್ಷೇತ್ರ ಮಾತ್ರವಲ್ಲದೆ ಸಾಂಸ್ಕೃತಿಕ ಹಾಗೂ ಇತರ ಕ್ಷೇತ್ರಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದ ವೇಣುಗೋಪಾಲ ನ್ಯಾಯವಾದಿಯಾಗಿಯೂ ಉತ್ತಮ ಜನಾನುರಾಗಿಯಾಗಿದ್ದರು ಕಡು ಬಡತನದಿಂದ ಬರುವ ಕಕ್ಷಿದಾರರಿಗೆ ಯಾವುದೇ ಹಣವನ್ನು ನಿರೀಕ್ಷಿಸದೆ ಕಾನೂನು ಸಲಹೆ ಸೇವೆ ನೀಡುತ್ತಿದ್ದರು ಅವರು ನಿನ್ನೆ ರಾತ್ರಿ ತನ್ನ ಸಹೋದರಿಯ ಮನೆಗೆ ಹೋಗಿದ್ದು ಇಂದು ಬೆಳಿಗ್ಗೆ ಅವರಿಗೆ ಹೃದಯಾಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸಚ್ಚೇರಿಪೇಟೆ ನಿವಾಸಿಯಾಗಿರುವ ವೇಣುಗೋಪಾಲ ಅವರು ಅವಿವಾಹಿತರಾಗಿದ್ದಾರೆ. ಮೃತರ ನಿಧನಕ್ಕೆ ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮೂಡುಬಿದಿರೆ ವಕೀಲರ ಸಂಘ ಮತ್ತು ಜಿಲ್ಲಾ ಪತ್ರಕರ್ತರ ಸಂಘ ಸಂತಾಪ ವ್ಯಕ್ತಪಡಿಸಿದೆ.



