ಉಡುಪಿ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಘಟಕ ಮತ್ತು ದಸಂಸ ಭೀಮವಾದ ಉಡುಪಿ ಜಿಲ್ಲೆ ಇದರ ವತಿಯಿಂದ ಅಂಬೇಡ್ಕರ್ ಅವರ ಧಮ್ಮದೀಕ್ಷೆ ದಿನಾಚರಣೆ ಮತ್ತು ಮೂಲನಿವಾಸಿಗಳ ರಾಜ ಮಹಿಷಾಸುರ ಹಬ್ಬ ಕಾರ್ಯಕ್ರಮವನ್ನು ಬೈರಂಪಳ್ಳಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಸಾಹಿತಿ ಡಾ. ಕೆ.ಎ. ಓಬಳೇಶ್ ಮಾತನಾಡಿ, ಈ ನೆಲದ ಮೂಲನಿವಾಸಿಗಳ ರಾಜ ಮಹಿಷಾಸುರ. ಈ ದೇಶಕ್ಕೆ ವಲಸೆ ಬಂದ ಆರ್ಯರು ಮಹಿಷಾನನ್ನು ರಾಕ್ಷಸ ಎಂದು ಬಿಂಬಿಸಿ, ಚಿತ್ರಿಸಿದ್ದಾರೆ. ಮಹಿಷಾಸುರನ ಆಳ್ವಿಕೆಗೆ ಒಳಪಟ್ಟ ನಾಡು ಮಹಿಷಾಮಂಡಲವಾಗಿತ್ತು. ಮಹಿಷನ ಗುರುತು ಎಮ್ಮೆ ಎನ್ನುವ ಪರಿಕಲ್ಪನೆಯಾಗಿದೆ ಎಂದರು.
ಆರ್ ಪಿಐಕೆ ಪಕ್ಷದ ಜಿಲ್ಲಾಧ್ಯಕ್ಷ ಸದಾಶಿವ ಶೆಟ್ಟಿ ಹೇರೂರು ಅಧ್ಯಕ್ಷತೆ ವಹಿಸಿದ್ದರು.
ಆರ್ ಪಿಐಕೆ ಪಕ್ಷದ ರಾಜ್ಯಸಮಿತಿಯ ಸದಸ್ಯ ಕೆ.ಬಿ. ರಾಜು ಕೊಡಗು, ಜನಪರ ಹೋರಾಟಗಾರ ಶೇಖರ್ ಹಾವಂಜೆ, ದಸಂಸ ಜಿಲ್ಲಾ ಸಂಚಾಲಕ ಸಂಜೀವ ಕುಕ್ಕೆಹಳ್ಳಿ, ಜಿಲ್ಲಾ ಸಂಘಟಕ ರಮೇಶ್ ಹರಿಖಂಡಿಗೆ ಉಪಸ್ಥಿತರಿದ್ದರು.



