ಬಜಪೆ:ನದಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುಪುರ ಎಂಬಲ್ಲಿ ಶನಿವಾರದಂದು ನಡೆದಿದೆ.

ಕುಲಶೇಖರ ಬಳಿಯ ಕನ್ನಗುಡ್ಡೆ ನಿವಾಸಿ ಅಮರನಾಥ್ (36)ಮೃತ ದುರ್ಧೈವಿ. ಮೃತ ಯುವಕ ವೃತ್ತಿಯಲ್ಲಿ ಕಟ್ಟಡ ಕಾರ್ಮಿಕನಾಗಿದ್ದರು. ಊರ್ವಸ್ಟೋರ್ ನಿವಾಸಿಯಾಗಿದ್ದ ಅಮರ ನಾಥ್ ಕುಲಶೇಖರ ಕನ್ನಗುಡ್ಡೆ ಎಂಬಲ್ಲಿ ವಾಸವಿದ್ದರು.

ಶನಿವಾರ ಮಧ್ಯಾಹ್ನ ಅಮರನಾಥ್ ತನ್ನ ಬೈಕನ್ನು ಗುರುಪುರ ಸೇತುವೆಯ ಬದಿಯಲ್ಲಿ ನಿಲ್ಲಿಸಿ ನದಿಗೆ ಹಾರಿದ್ದನ್ನು ಸ್ಥಳೀಯರು ಗಮನಿಸಿ ಕೂಡಲೇ ಬಜಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಆಗಮಿಸಿದ ಬಜಪೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಮುಳುಗು ತಜ್ಞರ ಸಹಾಯದಿಂದ ನದಿಯಲ್ಲಿ ಶೋಧ ಕಾರ್ಯ ನಡೆಸಿ ಪಡುಶೆಡ್ಡೆ ಎಂಬಲ್ಲಿ ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ.

ಅಮರನಾಥ್ ಕಳೆದ ಏಳು ವರ್ಷಗಳಿಂದ ಮಾನಸಿಕ ಖಿನ್ನತೆ ಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




