ಕಾರ್ಕಳ: ಚಹಾ ಕುಡಿಯುತ್ತಿದ್ದ ವೇಳೆ ಒಮ್ಮೇಲೆ ಕುಸಿದುಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ನೂರಾಳ್ ಬೆಟ್ಟು ಗ್ರಾಮದ ಪೂಜಾಂಜೆ ಎಂಬಲ್ಲಿ ನಿನ್ನೆ ಬೆಳಿಗ್ಗೆ ನಡೆದಿದೆ.

ಮೃತರನ್ನು ಪೂಜಾಂಜೆ ನಿವಾಸಿ ಆನಂದ ಎಂಬವರ ಪುತ್ರ ವೇಣುಗೋಪಾಲ (31) ಎಂದು ಗುರುತಿಸಲಾಗಿದೆ. ಅವರು ಸಂಬಂಧಿಕರ ಮನೆಯಲ್ಲಿ ಬೆಳಿಗ್ಗೆ ಚಹಾ ಕುಡಿಯುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದರು ಎನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಅವರು, ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



