ಉಡುಪಿ: ಪುತ್ತಿಗೆ ಪರ್ಯಾಯೋತ್ಸವದ ಸ್ವಾಗತ ಸಮಿತಿಯ ವಿಶೇಷ ಸಭೆ ಕಾರ್ಯಾಧ್ಯಕ್ಷ ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಆರ್ಥಿಕ, ಹೊರೆ ಕಾಣಿಕೆ, ಸಾಂಸ್ಕೃತಿಕ ಸಮಿತಿಗಳ ಕಾರ್ಯ ವೈಖರಿ ಬಗ್ಗೆ ಚರ್ಚೆ ನಡೆಯಿತು. ಸಮಿತಿಯ ಮಹಾ ಪೋಷಕ ಶಾಸಕ ಯಶ್ಪಾಲ್ ಸುವರ್ಣ ಹೊರೆ ಕಾಣಿಕೆಯ ಮನವಿಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ನವರಾತ್ರಿ ಸಂದರ್ಭದಲ್ಲಿ ಪುತ್ತಿಗೆ ಪರ್ಯಾಯಕ್ಕೆ ಧನ ಹಾಗೂ ಧಾನ್ಯ ಲಕ್ಷ್ಮಿಯ ಅನುಗ್ರಹ ಪ್ರವಾಹ ಹರಿದು ಅಕ್ಷಯ ಆಗಲಿ. ಶ್ರೀ ಕೃಷ್ಣ ಮುಖ್ಯಪ್ರಾಣ ರ ಸೇವೆಯನ್ನು ನಾವೆಲ್ಲರೂ ಒಟ್ಟಾಗಿ ಮಾಡೋಣ ಎಂದರು.
ಸಭೆಯಲ್ಲಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಪ್ರಧಾನ ಕಾರ್ಯದರ್ಶಿ ಬೆಳಪು ದೇವಿಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ರಂಜನ್ ಕಲ್ಕೂರ, ಸಂಚಾಲಕ ಪ್ರಸಾದ್ರಾಜ್ ಕಾಂಚನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಜಯಕರ್ ಶೆಟ್ಟಿ ಇಂದ್ರಾಳಿ, ಕಪ್ಪೆಟ್ಟು ಪ್ರವೀಣ್ ಶೆಟ್ಟಿ, ದಿನೇಶ್ ಪುತ್ರನ್, ಎಂ ಎಲ್ ಸಾಮಗ, ಶ್ರೀಪತಿ ಭಟ್, ಹೆಜಮಾಡಿ ದಯಾನಂದ ಬಂಗೇರ, ಗಣೇಶ್ ರಾವ್ , ಸಂತೋಷ್ ಶೆಟ್ಟಿ ತೆಂಕರಗುತ್ತು , ಮಟ್ಟಾರ್ ರತ್ನಾಕರ್ ಹೆಗ್ಡೆ , ಬಾಲಾಜಿ ಯೋಗೀಶ್ ಶೆಟ್ಟಿ ಉಪಸ್ಥಿತರಿದ್ದರು.



