ಕಿನ್ನಿಗೋಳಿ; ಈಗಾಗಲೇ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ನಡೆದಿದೆ.

ಬಡವರ ಕಷ್ಟಕ್ಕೆ ನೆರವುವಾಗುವ ಮೂಲಕ ಧಿಮಂತನಾಯಕ ಎನಿಸಿಕೊಂಡ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರಿಂದ ಮತ್ತೊಂದು ಶ್ಲಾಘನೀಯ ಕಾರ್ಯ ನಡೆದಿದೆ. ಹೌದು, ಮಂಗಳೂರಿನ ಕಿನ್ನಿಗೋಳಿಯ ನೇಕಾರ ಕಾಲೋನಿ ನಿವಾಸಿ ಶ್ರೀಮತಿ ಸುರೇಖ ಶೆಟ್ಟಿಯವರು ಹಳೆಯ ಹೆಂಚಿನ ಮನೆಯಲ್ಲಿ ವಾಸವಿದ್ದು, ಮಳೆಗಾಲದ ಸಮಯದಲ್ಲಿ ನೀರು ಮನೆಯೊಳಗೆ ಬರುವುದರಿಂದ, ವಾಸವಾಗಲು ತುಂಬಾ ಕಷ್ಟಕರವಾಗಿತ್ತು. ಇದೀಗ ಸಮಾಜ ಕಲ್ಯಾಣ ಯೋಜನೆಯಾಡಿಯಲ್ಲಿ ಸುರೇಖ ಶೆಟ್ಟಿಯವರಿಗೆ, ಮನೆ ನಿರ್ಮಾಣಕ್ಕೆ ಮಂಜೂರು ಮಾಡಿದ ಧನಸಹಾಯದ ಚೆಕ್ಕನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಹಸ್ತಾಂತರಿಸಿದ್ದಾರೆ.

ಇನ್ನೂ ಈ ಸಂದರ್ಭದಲ್ಲಿ ಬಂಟರ ಸಂಘ ಮೂಲ್ಕಿಯ ಅಧ್ಯಕ್ಷರಾದ ಪುರುಷೋತ್ತಮ್ ಶೆಟ್ಟಿ ಉಪಸ್ಥಿತರಿದ್ದರು.



