ಲೋಕವಿಖ್ಯಾತ ಮಂಗಳೂರು ದಸರಾದ ಮೆರುಗನ್ನು ಹೆಚ್ಚಿಸಲು ಈ ಬಾರಿ “ಯುವ ದಸರಾ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದ್ದಾರೆ.

ಇವರು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿ, ಇದೇ ಬರುವ ಅಕ್ಟೋಬರ್ 21ರಂದು ಮಂಗಳೂರಿನ ಲೇಡಿಹಿಲ್ ಚರ್ಚ್ನ ಗ್ರೌಂಡಿನಲ್ಲಿ ಕನ್ನಡ ಮತ್ತು ತುಳು ಚಿತ್ರರಂಗದ ಹಲವಾರು ತಾರೆಯರ ಸಮಾಗಮದಲ್ಲಿ ಪ್ರಥಮ ಬಾರಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.



