ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿ ಪಂಜ ಕೊಯಿಕುಡೆ ನವರಾತ್ರಿ ಮಹೋತ್ಸವದ ಪ್ರಯುಕ್ತ ಲಲಿತ ಪಂಚಮಿಯ0ದು ಚಂಡಿಕಾ ಹೋಮ ಮತ್ತು ಮಹಾಪೂಜೆ ನಡೆದಿದೆ.

ವೇದಮೂರ್ತಿ ವಿದ್ವಾನ್ ಪ್ರಸನ್ನ ತಂತ್ರಿ ಇವರ ಮಾರ್ಗದರ್ಶನದಲ್ಲಿ ಪಂಜ ಮಹಾಗಣಪತಿ ಮಂದಿರದ ಅರ್ಚಕರಾದ ಸುರೇಶ್ ಭಟ್ ಪಂಜ ಮತ್ತು ಕಾರ್ತಿಕೇಯ ಭಾರ್ಗವ ಇವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ದೇವಿಯ ದರ್ಶನ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ಸನ್ನಿಧಿಯ ಪ್ರಧಾನರಾದ ಸೀತಾರಾಮ ಆಮೀನ್ ಹಾಗೂ ದೇವಿಯ ಭಕ್ತ ವೃಂದ ಪಂಜ ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು



