ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ಅಕ್ಟೋಬರ್ 28 ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ಶ್ರೀಮತಿ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ ದಿನಪೂರ್ತಿ ಜರಗಲಿರುವ “ವಿಶ್ವ ಬಂಟರ ಕ್ರೀಡಾಕೂಟ” ಹಾಗೂ ಅಕ್ಟೋಬರ್ 29 ರಂದು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ವಠಾರದಲ್ಲಿ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ನಡೆಯಲಿರುವ “ವಿಶ್ವ ಬಂಟರ ಸಾಂಸ್ಕೃತಿಕ ವೈಭವ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅಕ್ಟೋಬರ್ 21 ಶನಿವಾರ ದಂದು ಮೂಲ್ಕಿ ಸುಂದರಾಮ್ ಶೆಟ್ಟಿ ಹಾಲ್ ಬಂಟರ ಭವನ, ಪತ್ತೂರು ಇಲ್ಲಿ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಸಕರು ಅಶೋಕ್ ಕುಮಾರ್ ರೈ, ಪುತ್ತೂರು ಬಂಟರ ಸಂಘದ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಹೇಮಾನಾಥ್ ಶೆಟ್ಟಿ ಕಾವು, ಅರಿಯಡ್ಕ ಚಿಕ್ಕಪ್ಪ ರೈ, ಶ್ರೀಮತಿ ಮಲ್ಲಿಕಾ ಪ್ರಸಾದ್ ಮಾಜಿ ಸಚಿವರು ಹಾಗೂ ಮಹಿಳಾ ಸಮಿತಿ ಅಧ್ಯಕ್ಷೆ, ಕಾರ್ಯದರ್ಶಿ ದಯಾನಂದ ರೈ, ಕೋಶಾಧಿಕಾರಿ ಕೃಷ್ಣ ಪ್ರಸಾದ್ ಆಳ್ವ, ರಮೇಶ್ ರೈ ಡಿಂಬ್ರಿ, ಸವಿತಾ ಭoಡಾರಿ, ಶಶಿರಾಜ್ ರೈ, ಪವನ್ ಶೆಟ್ಟಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಜೊತೆ ಕಾರ್ಯದರ್ಶಿ ಹಾಗೂ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಶ್ರೀ ಚಂದ್ರಹಾಸ್ ಡಿ.ಶೆಟ್ಟಿ ರಂಗೋಲಿ, ಮಾಜಿ ಕೋಶಾಧಿಕಾರಿ ಶ್ರೀ ಕೊಲ್ಲಾಡಿ ಬಾಲಕೃಷ್ಣ ರೈ, ಆಹ್ವಾನಿತ ಸದಸ್ಯರಾದ ಶ್ರೀ ರವಿರಾಜ್ ಶೆಟ್ಟಿ ಜತ್ತಬೆಟ್ಟು, ಶ್ರೀ ಭರತ್ ಭಂಡಾರಿ ನಟ, ಪುತ್ತೂರು ತಾಲೂಕಿನ ವಿವಿಧ ಬಂಟರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸರ್ವಸದಸ್ಯರುಗಳು ಉಪಸ್ಥಿತರಿದ್ದರು.





