ಮೂಲ್ಕಿ: ಭಾರತ ಸರಕಾರ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು,ರೋಟರಿ ಕ್ಲಬ್ ಕಿನ್ನಿಗೋಳಿ, ವೃಕ್ಷಪ್ರೇಮಿ ಶ್ರೀ ವಿನೇಶ್ ಪೂಜಾರಿ ನಿಡ್ಡೋಡಿ, ಮತ್ತು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ಇವರ ಸಹಕಾರದಲ್ಲಿ ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ 10ನೇ ತೋಕೂರು ಹಳೆಯಂಗಡಿ ಇವರ ಆಶ್ರಯದಲ್ಲಿ ದಿನಾಂಕ 22.10.2023ನೇ ಆದಿತ್ಯವಾರ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಮತ್ತು ಜಲಕದ ಕೆರೆಯ ಇಕ್ಕೆಲಗಳಲ್ಲಿ ನಾಗಲಿಂಗ ಪುಷ್ಪದ ಗಿಡವನ್ನು ನೆಡುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ವೃಕ್ಷ ಪ್ರೇಮಿ ವಿನೇಶ್ ಪೂಜಾರಿ ನಿಡ್ಡೋಡಿಯವರು ಈಗಾಗಲೇ ಅಯೋಧ್ಯೆಯಲ್ಲಿ ಇರುವ ಶ್ರೀರಾಮ ಮಂದಿರಕ್ಕೆ ನಾಗಲಿಂಗ ಪುಷ್ಪ ಗಿಡಗಳನ್ನು ನೀಡಿದ್ದು ಮಾತ್ರವಲ್ಲದೆ ಸ್ಥಳೀಯ ಎಲ್ಲಾ ದೇವಾಲಯಗಳಿಗೆ ನಾಗಲಿಂಗ ಪುಷ್ಪ ಗಿಡಗಳನ್ನು ವಿತರಣೆಯನ್ನು ಮಾಡುತ್ತಿವುದರ ಬಗ್ಗೆ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಹರಿದಾಸ್ ಭಟ್ ರವರು ವಿನೇಶ್ ಪೂಜಾರಿಯವರನ್ನು ಶಾಲು ಹೊದಿಸಿ ಪ್ರಸಾದವನ್ನು ನೀಡಿ ಗೌರವಿಸಿದರು ಪ್ರಕೃತಿಯಲ್ಲಿನ ವಿನಾಶದತ್ತ ಸಾಗುತ್ತಿರುವ ಸಸ್ಯ ಸಂಕುಲಗಳ ಬಗೆಗಿನ ಕಾಳಜಿ ಮಹತ್ತರವಾದದ್ದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಿನ್ನಿಗೋಳಿಯ ರೊ. ದೇವಿದಾಸ್ ಶೆಟ್ಟಿ , ರೊ. ಸ್ವರಾಜ್ ಶೆಟ್ಟಿ,ಮತ್ತು ದೈವಿಕ್, ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರಿನ ಅರ್ಚಕರಾದ ಶ್ರೀ ಮಧುಸೂದನ್ ಭಟ್, ವಿಶ್ವಬ್ಯಾಂಕ್ ಕುಡಿಯುವ ನೀರು ಮತ್ತು ಪರಿಸರ ನೈರ್ಮಲ್ಯ ಸಮಿತಿ, ಕ್ಲಸ್ಟರ್ 2 ರ ಅಧ್ಯಕ್ಷರಾದ ಶ್ರೀ ದಿನಕರ್ ಸಾಲ್ಯಾನ್, ಶ್ರೀ ಪುರುಷೋತ್ತಮ ಕೋಟ್ಯಾನ್ ಫೇಮಸ್ ಯೂತ್ ಕ್ಲಬ್ ರೋಟರಿ ಸಮುದಾಯದಳ ಅಧ್ಯಕ್ಷರಾದ ಶ್ರೀ ಮೋಹನ್ ದಾಸ್ ದೇವಾಡಿಗ, ಫೇಮಸ್ ಯೂತ್ ಕ್ಲಬ್ಬಿನ ಅಧ್ಯಕ್ಷರಾದ ಶ್ರೀ ಭಾಸ್ಕರ್ ಅಮೀನ್ ತೋಕೂರು, ಉಪಾಧ್ಯಕ್ಷರಾದ ಶ್ರೀ ಭೋಜ ಕೋಟ್ಯಾನ್ ಕಾರ್ಯದರ್ಶಿ ಶ್ರೀ ಹಿಮಕರ್ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಪ್ರೇಮಲತಾ ಯೋಗೀಶ್, ಉಪಾಧ್ಯಕ್ಷರಾದ ಅಮಿತಾ ದಿನಕರ್ ಸಾಲ್ಯಾನ್, ಕಾರ್ಯದರ್ಶಿ ಕುಸುಮ ಎಚ್ ಕೋಟ್ಯಾನ್, ಕೋಶಾಧಿಕಾರಿ ಇಂದಿರಾ ಸಂಜೀವ ಕರ್ಕೇರ ಮತ್ತು ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.






