ಬಂಟ್ವಾಳ: ನವರಾತ್ರಿಯ ವಿಜಯದಶಮಿಯ ಕೊನೆಯ ದಿನದಂದು ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ತೆನೆ ಹಬ್ಬದ ಪ್ರಯುಕ್ತ, ಭಕ್ತರಿಗೆ ತೆನೆ ವಿತರಿಸುವ ಕಾರ್ಯಕ್ರಮ ನಡೆಯಿತು.

ಆರಂಭದಲ್ಲಿ ತೆನೆಗೆ ಪೂಜೆ ಸಲ್ಲಿಸಿ ಬಳಿಕ ಬತ್ತವನ್ನು ಕೊಯ್ಯಲಾಯಿತು. ಕೊಯ್ದ ತೆನೆಯನ್ನು ತೆರೆದ ವಾಹನದ ಮೂಲಕ ದೇವಾಲಯಕ್ಕೆ ತಂದು, ದೇವರ ಮುಂದೆ ತೆನೆಯನ್ನು ಇರಿಸಿ ಪೂಜೆ ಸಲ್ಲಿಸಿ ಅಬಳಿಕ ತೆನೆಯನ್ನು ಕಟ್ಟಿದರು.

ದೇವಸ್ಥಾನದಲ್ಲಿ ತೆನೆ ತುಂಬಿಸಿದ ಬಳಿಕ ಭಕ್ತರಿಗೆ ತೆನೆ ವಿತರಿಸಲಾಯಿತು. ಈ ಸಂದರ್ಭದಲ್ಲಿ
ಅಡಳಿತ ಮಂಡಳಿಯವರು ಉಪಸ್ಥಿತರಿದ್ದರು.



