ಮೂಲ್ಕಿ: ನಿಗಮದ ಪ್ರತಿನಿಧಿಗಳ ಶ್ರೇಯೋಭಿವೃದ್ಧಿಯ ಉನ್ನತ ಧ್ಯೇಯದಿಂದ ಸ್ಥಾಪಿತಗೊಂಡ ಸಂಸ್ಥೆಯು ಸಂಘಟನಾತ್ಮಕವಾಗಿ ಉತ್ತಮ ಸೇವೆ ನೀಡುತ್ತಿದ್ದು ಪ್ರತಿನಿಧಿಗಳ ಭಾಗವಹಿಸುವಿಕೆ ಬಹಳ ಮುಖ್ಯವಾಗಿದೆ ಎಂದು ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘಟನೆಯ ರಾಜ್ಯಾಧ್ಯಕ್ಷ ಲೋಕೇಶ್ ಶೆಟ್ಟಿ ಹೇಳಿದರು. ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಗುರುವಾರ ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘಟನೆಯ ಮೂಲ್ಕಿ ಘಟಕದ 19ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಎಲ್ಐಸಿಎಂಐ ದಕ್ಷಿಣ ಮಧ್ಯವಲಯದ ಅಧ್ಯಕ್ಷ ಎಲ್ ಮಂಜುನಾಥ್ ದಿಕ್ಸೂಚಿ ಭಾಷಣ ಮಾಡಿ, ಸಂಘಟನೆ ಪ್ರಭಲವಾಗಿದ್ದರೆ ಮಾತ್ರ ಪ್ರತಿನಿಧಿಗಳ ಆಶೋತ್ತರಗಳು ಪ್ರಾಮಾಣಿಕವಾಗಿ ಈಡೇರಲಿದೆ. ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಇನ್ನಷ್ಟು ಉನ್ನತೀಕರಣ ಗೊಳಿಸಲು ಪ್ರತಿನಿಧಿಗಳ ಮುಕ್ತ ಸಹಕಾರದ ಅಗತ್ಯವಿದೆ ಎಂದರು.ಈ ಸಂದರ್ಭ ಎಲ್ಐಸಿಎಂಐ ಸಂಘಟನಾತ್ಮಕ ಸಾಧಕ ದಿ. ರಮೇಶ್ ಕುಮಾರ್ ಸ್ಮರಣಾರ್ಥ ಸಾಧಕ ಪ್ರಶಸ್ತಿಯನ್ನು ನಿಗಮದ ಹಿರಿಯ ಪ್ರತಿನಿಧಿ ಭಾಸಕರ ಪುತ್ರನ್ ರವರಿಗೆ ನೀಡಿ ಗೌರವಿಸಲಾಯಿತು.

ಎಲ್ಐಸಿಎಂಐ ಉಡುಪಿ ವಿಭಾಗದ ಅಧ್ಯಕ್ಷ ಹಿರಿಯ ಸಂಘಟಕ ಎಂ.ಎಸ್. ಭಟ್ ರವರ ಸೇವಾ ಸಾಧನೆ ಗೌರವಿಸಿ ಮೂಲ್ಕಿ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಎಲ್ಐಸಿಎಂಐ ಮೂಲ್ಕಿ ಘಟಕದ ಅಧ್ಯಕ್ಷ ಲಕ್ಷ್ಮಣ್ ಸಾಲ್ಯಾನ್ ವಹಿಸಿದ್ದರು.ಅತಿಥಿಗಳಾಗಿ ನಿಗಮದ ಮೂಲ್ಕಿ ಶಾಖಾ ಪ್ರಭಂದಕ ಕೆ.ಪ್ರಕಾಶ್, ಉಪ ಶಾಖಾಧಿಕಾರಿ ಮಂಜುನಾಥ ಎ.ವಿ. ಅಭಿವೃದ್ಧಿ ಅಧಿಕಾರಿಗಳ ಸಂಘಟನೆಯ ಮೂಲ್ಕಿ ಶಾಖೆಯ ಅಧ್ಯಕ್ಷ ಮುತ್ತಯ್ಯ ಮರಾಠೆ, ಎಲ್ಐಸಿಎಂಐ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ, ಎಲ್ಐಸಿಎಂಐ ಮೂಲ್ಕಿ ಘಟಕದ ಗೌರವಾಧ್ಯಕ್ಷ ಎಂ.ಎಸ್.ಗುರುಪುರ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪೆರ್ಮುದೆ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಅನಿತಾ ಕ್ಯಾಥರೀನ್ ಡಿಸೋಜ, ಸಂಘಟನಾ ಕಾರ್ಯದರ್ಶಿ ಲ್ಯಾನ್ಸಿ ಅಲ್ಮೆಡಾ, ಮಹಿಳಾ ಸಂಘಟನಾ ಕಾರ್ಯದರ್ಶಿ ಜ್ಯೋತಿ ಎ ಶೆಟ್ಟಿ,ಕಾರ್ಯದಶರ್ಿ ಶಾರದಾ ಜಿ. ಬಂಗೇರ ಉಪಸ್ಥಿತರಿದ್ದರು.ಲಕ್ಷ್ಮಣ್ ಸಾಲ್ಯಾನ್ ಸ್ವಾಗತಿಸಿದರು, ಗುಲಾಬಿ ಸುರೇಂದ್ರ ನಿರೂಪಿಸಿದರು, ರಾಜನ್ ಡಿಕೋಸ್ಟಾ ವಂದಿಸಿದರು.



