ಕರಾವಳಿ

ಶಿಕ್ಷಣದ ಆಯಾಮ ಬಹಳ ದೊಡ್ಡದು; ಡಾ.ನಾ ಸೋಮೇಶ್ವರ

ಮೂಡುಬಿದಿರೆ: ಶಿಕ್ಷಣ ಅಂದ್ರೆ ಜ್ಞಾನ , ಕೌಶಲ್ಯ , ಸೃಜನಶೀಲತೆ ಸಮಸ್ಯೆ ನಿವಾರಣೆ, ಮೌಲ್ಯಗಳು ಎಂದು ಹೇಳಬಹುದು. ಪ್ರತಿಯೊಂದು ಮಗುವಿಗೂ ನಿಜವಾದ ಪಾಠ ಶಾಲೆ ಮನೆಯೇ ಆಗಿರುತ್ತದೆ. ಅಲ್ಲಿ ತಾಯಿಯೇ ಮೊದಲು ಗುರುವಾಗುತ್ತಾಳೆ.

ಇನ್ನು ಶಾಲೆಗಳಲ್ಲಿ ಕಲಿಯಬೇಕು ಎಂಬ ಹಂಬಲ ವಿದ್ಯಾರ್ಥಿಗಳಲ್ಲಿ ಬರುವಂತಹ ಪರಿಸರವನ್ನು ಅಧ್ಯಾಪಕನಾದವನು ಒದಗಿಸಬೇಕು. ಶಿಕ್ಷಣ ಪರಿಪೂರ್ಣವಾಗಬೇಕಾದರೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಪ್ರಯತ್ನಿಸಬೇಕು. ಈ ನಿಟ್ತಿನಲ್ಲಿ ಮಕ್ಕಳಲ್ಲಿ ಒಂಭತ್ತು ವಿಧದ ಜನ್ಮದತ್ತ ಪ್ರತಿಭೆಗಳಿರುತ್ತವೆ. ಅದನ್ನು ಗುರುತಿಸಿ ಉತ್ತಮ ಮಾರ್ಗದರ್ಶನ ನೀಡುವುದು ಅಧ್ಯಾಪಕನ ಕರ್ತವ್ಯವಾಗಬೇಕು. ಮಕ್ಕಳ ಆಸಕ್ತಿ ಕ್ಷೇತ್ರವನ್ನು ಗಮನಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣವನ್ನು ನೀಡುವವರು ಯಾವುದೇ ಪ್ರತಿಫಲವನ್ನು ನಿರೀಕ್ಷಿಸಬಾರದು ಹಣಕ್ಕಾಗಿ ಯಾವತ್ತೂ ಪಾಠವನ್ನು ಹೇಳಬಾರದು ಅದು ಸೇವೆಯಾಗಬೇಕು.


ಎಲ್ಲಿ ವೃತ್ತಿಗೆ ಹಣ ಆಮೀಷವಾಗುತ್ತದೆಯೋ ಅಲ್ಲಿ ವ್ಯಾಪಾರೀಕರಣವಾಗುತ್ತದೆ. ಸಮಚಿತ್ತ, ಅದಮ್ಯಾ ಒಲವು, ಅನ್ವೇಷಣಾ ಮನೋಭಾವ , ಸಮರ್ಪಕ ಸಂವಹನ ಸಾಮರ್ಥ್ಯ, ನಿರಂತರ ಕಲಿಕೆ , ಸೃಜನಶೀಲತೆ, ತಾಳ್ಮೆಯಿಂದ ಆಲಿಸುವಿಕೆ, ನಿತ್ಯ ಪೂರ್ವ ಸಿದ್ಧತೆ , ಸಹಾನುಭೂತಿಯ ನಾಯಕತ್ವ, ವಿಜ್ಞಾನ ವಿಶೇಷಗಳ ಪ್ರಾಥಮಿಕ ತಿಳುವಳಿಕೆಯನ್ನು ಅಧ್ಯಾಪಕನಾದವನು ಹೊಂದಿರಬೇಕೆಂದು ಚಂದನ ವಾಹಿನಿಯ “ಥಟ್ ಅಂತ ಹೇಳಿ” ಖ್ಯಾತಿಯ ಡಾ.ನಾ. ಸೋಮೇಶ್ವರ ಅವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ, ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ -ಉಪನ್ಯಾಸಕರ ಕಾರ್ಯಾಗಾರದಲ್ಲಿ ಉತ್ತಮ ಅಧ್ಯಾಪಕರಿಗೆ ಇರಬೇಕಾದ ಲಕ್ಷಣಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಶಿವಕುಮಾರ್ ಭಟ್ , ಸೆಂಟ್ರಲ್ ಶಾಲೆಯ ಪ್ರಾಂಶುಪಾಲೆ ದಿವ್ಯಾ ಬಾಳಿಗ ಹಾಗೂ ಸಂಸ್ಥೆಯ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಉಪನ್ಯಾಸಕ ರಂಜಿತ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಬಂಟ್ವಾಳ: ಆಡಳಿತ ಸೌಧದ ಲಿಪ್ಟ್ ನಲ್ಲಿ 45 ನಿಮಿಷ ಸಿಲುಕಿದ ಸಾರ್ವಜನಿಕರು..!

ಬಂಟ್ವಾಳ ಆಡಳಿತ ಸೌಧದ ಕಚೇರಿಯಲ್ಲಿ ಸಾರ್ವಜನಿಕ ಉಪಯೋಗಕ್ಕೆ ಅಳವಡಿಸಲಾಗಿರುವ ಲಿಪ್ಟ್ನೊಳಗೆ ಇಬ್ಬರು ವ್ಯಕ್ತಿಗಳು ಸುಮಾರು 45 ನಿಮಿಷಗಳ ಕಾಲ ಸಿಲುಕಿಕೊಂಡು…

7 mins ago

ಬಂಟ್ವಾಳ: ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಮಳೆ ಹಬ್ಬವೆನ್ನುವ ಮಕ್ಕಳ ಕಲಿಕಾ ಚೈತನ್ಯ ಶಿಬಿರ ಆಯೋಜನೆ..!

ಶಾಲೆಗಳು ವಿದ್ಯಾರ್ಥಿ ಸ್ನೇಹಿಯಾಗಿರಬೇಕು, ಮಕ್ಕಳು ಸಂಭ್ರಮದಿಂದ ಕಲಿಕೆಯಲ್ಲಿ ತೊಡಗಬೇಕೆನ್ನುವ ಮಹತ್ವಕಾಂಕ್ಷೆ ಎಲ್ಲರಲ್ಲೂ ಇದೆ. ಬೇಸಿಗೆ ರಜೆಯ ಮಜಾವನ್ನು ಕಳೆದು ಸಪ್ಪೆ…

14 mins ago

ಉಡುಪಿ: ಪಾಜೆರೋ ಕಾರು ಪ*ಲ್ಟಿ ; ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರು….!

ಟೈಲ್ಸ್ ಸಾಗಿಸುತ್ತಿದ್ದ ಪಾಜೆರೋ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬ್ರಹ್ಮಾವರ ಸಮೀಪದ ಧರ್ಮಾವರಂ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ.…

6 hours ago

ಬ್ರಹ್ಮಾವರ: ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಒಂದೂವರೆ ವರ್ಷದ ಮಗು ಸಾವು..!

ತೆಂಗಿನ ಮರದಿಂದ ಬಿದ್ದ ತೆಂಗಿನಕಾಯಿ ತಲೆಗೆ ಬಡಿದ ಪರಿಣಾಮ ಒಂದೂವರೆ ವರ್ಷದ ಗಂಡು ಮಗು ಮೃತಪಟ್ಟ ದಾರುಣ ಘಟನೆ ಬ್ರಹ್ಮಾವರ…

6 hours ago

ಮೂಡುಬಿದಿರೆ: ಗರ್ಭಿಣಿ ದನಗಳ ಮೇಲೆ ಕತ್ತಿಯಿಂದ ಹ*ಲ್ಲೆ…..!

ನೆರೆಮನೆಯ ದನಗಳು ತನ್ನ ತೋಟಕ್ಕೆ ಬಂದು ಹಾನಿಗೊಳಿಸಿವೆ ಎಂಬ ಆಕ್ರೋಶದಿಂದ ಹಟ್ಟಿಯಲ್ಲಿ ಕಟ್ಟಿಹಾಕಿದ್ದ ದನಗಳಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿ…

23 hours ago

ಮಂಗಳೂರು: ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ; ಮೂವರು ಆರೋಪಿಗಳ ಬಂಧನ..!

ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ…

23 hours ago