ಬಜಪೆ : ರಾಮ್ ಸೇನಾ ವಾಯುಪುತ್ರ ಘಟಕ ಕುಪ್ಪೆಪದವು ಇದರ ವತಿಯಿಂದ ನವರಾತ್ರಿಯ ಸಂಧರ್ಭ ಭವತಿ ಭಿಕ್ಷಾಂದೆಹೀ ಮೂಲಕ ಸಂಗ್ರಹಿಸಿದ ಮೊತ್ತವನ್ನು ಆಶಕ್ತ ಕುಟುಂಬಗಳಿಗೆ ಕುಪ್ಪೆಪದವು ಶ್ರೀ ದುರ್ಗೇಶ್ವರೀ ದೇವಸ್ಥಾನದಲ್ಲಿ ಹಸ್ತಾಂತರಿಸಲಾಯಿತು.

ದೇರೆಬೈಲ್ ಕೊಂಚಾಡಿ ನಿವಾಸಿ ಅನುಪಮಾ ಇವರ 2 ತಿಂಗಳ ನವಜಾತ ಶಿಶುವಿನ ಚಿಕಿತ್ಸೆಗಾಗಿ 32,057, ಕುಪ್ಪೆಪದವು ನಿವಾಸಿ ಮೋಹನ್ ರ ಚಿಕಿತ್ಸೆಗೆ 10,500, ಮೂಡಬಿದಿರೆ ಅಲಂಗಾರು ನಿವಾಸಿ ಸಿಂಚನ ಎಂಬವರ ಚಿಕಿತ್ಸೆಗೆ 20,100, ಕುಪ್ಪೆಪದವಿನ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಯುವತಿಯೊರ್ವಳ ಮದುವೆಗೆ 10,500 ಸೇರಿದಂತೆ ಒಟ್ಟು 4 ಕುಟುಂಬಗಳಿಗೆ ಧನ ಸಹಾಯ ಹಸ್ತಾಂತರ ಮಾಡಲಾಯಿತು. ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕದ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.



