ವಿವಾಹಿತ ಮಹಿಳೆಯೊಬ್ಬರ ಶವ ಬಾವಿಯಲ್ಲಿ ಪತ್ತೆಯಾಗಿದೆ. ಈಕೆಯ ಗಂಡ ಸುಧಾಕರನಿಗೆ ಬೇರೊಂದು ಯುವತಿ ಜೊತೆ ಅಕ್ರಮ ಸಂಬ0ಧ ಇರುವ ವಿಚಾರ ತಿಳಿದು ದಂಪತಿ ನಡುವೆ ಜಗಳ ನಡೆಯುತ್ತಿತ್ತು.

ಅಂತೆಯೇ ನಿನ್ನೆ ಕೂಡ ದಂಪತಿಗಳ ನಡುವೆ ಜಗಳ ನಡೆದಿದ್ದು, ಈ ವೇಳೆ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವುದು ಮಾಹಿತಿ ಲಭ್ಯವಾಗಿದೆ. ಬೆಳಾಲು ಗ್ರಾಮದ ಮಾಚಾರಿನ ಜ್ಯೋತಿ ನಗರದಲ್ಲಿನ ಮನೆಯಲ್ಲಿರುವ ಬಾವಿಯಲ್ಲಿ ಶಶಿಕಲಾ ಅವರ ಶವ ಪತ್ತೆಯಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



