ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಬಳಿ ಲಯನ್ಸ್ ಸೌಧದಲ್ಲಿ ನೂತನವಾದ ಕ್ಯಾನ್ ಕೊ ಕ್ಯಾಶ್ಯೂ ಮತ್ತು ಡ್ರೈ ಫ್ರೂಟ್ಸ್ ಸ್ಟೋರ್ ನ ಉದ್ಘಾಟನೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ನೆರವೇರಿಸಿದರು.
ಈ ಸಂದರ್ಭ ಅವರು ಮಾತನಾಡಿ ಮುಲ್ಕಿ ತಾಲೂಕು ಅಭಿವೃದ್ಧಿಯತ್ತ ಸಾಗುತ್ತಿದ್ದು ನೂತನ ತಾಲೂಕು ಆಡಳಿತ ಸೌಧ, ಪ್ರವಾಸಿ ಮಂದಿರ, ನೂತನ ಅಗ್ನಿಶಾಮಕ ದಳ ಘಟಕ ಸ್ಥಾಪನೆ ಯಂತಹ ಮಹತ್ತರ ಯೋಜನೆಗಳು ಸದ್ಯದಲ್ಲಿ ಕಾರ್ಯಗತಗೊಳ್ಳಲಿದೆ ಜೊತೆಗೆ ಸ್ವಂತ ಉದ್ದಿಮೆಗಳ ಮುಖಾಂತರ ಅಭಿವೃದ್ಧಿಗೆ ಬೆಂಬಲ ಸೂಚಿಸುತ್ತಿರುವ ಉದ್ಯಮಿಗಳ ಕಾರ್ಯ ಯಶಸ್ವಿಯಾಗಲಿ ಎಂದರು.

ಚಿತ್ರನಟ ಅರ್ಜುನ್ ಕಾಪಿ ಕಾಡ್ ಮಾತನಾಡಿ ನೂತನ ಉದ್ಯಮ ಕ್ಯಾನ್ ಕೊ ಕ್ಯಾಶ್ಯೂ ಮತ್ತು ಡ್ರೈ ಫ್ರೂಟ್ಸ್ ಸ್ಟೋರ್ ಯಶಸ್ವಿಗೆ ಮುಲ್ಕಿ ನಾಗರಿಕರು ಬೆಂಬಲ ನೀಡಬೇಕಾಗಿದೆ ಎಂದರು.
ವೇದಿಕೆಯಲ್ಲಿ ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶೀತಲ್ ಸುಶೀಲ್, ಉಡುಪಿ ವಿನಿ ಟೆಕ್ ಗ್ರೂಪಿನ ಹರೀಶ್ ದೇವಾಡಿಗ,ಕ್ಯಾನ್ ಕೊ ಕ್ಯಾಶ್ಯೂ ಮತ್ತು ಡ್ರೈ ಫ್ರೂಟ್ಸ್ ಸ್ಟೋರ್ ಮಾಲಕ ವೆಂಕಟೇಶ್ ಬಂಗೇರ,
ಲ. ಸುಶೀಲ್ ಬಂಗೇರ, ದಕ್ಷಾ ಸಾಲ್ಯಾನ್ ಚಿತ್ರಾಪು, ರಂಗನಾಥ ಶೆಟ್ಟಿ, ಲ. ಕಿಶೋರ್ ಶೆಟ್ಟಿ ಬಪ್ಪನಾಡು, ಉದಯಕುಮಾರ್ ಶೆಟ್ಟಿ ಕಾರ್ನಾಡ್ ಬೈಪಾಸ್, ಉದಯ ಅಮೀನ್ ಮಟ್ಟು, ದೇವಿ ಪ್ರಸಾದ್ ಕೆಂಪುಗುಡ್ಡೆ, ಪ್ರಭಾಕರ್ ಕೆಂಪುಗುಡ್ಡೆ, ಸತೀಶ್ ಬಂಗೇರ,ಅಶ್ವಥ್ ಕೊಲಕಾಡಿ ಮತ್ತಿತರರು ಉಪಸ್ಥಿತರಿದ್ದರು. ದಿನೇಶ್ ಕೋಲ್ನಾಡು ನಿರೂಪಿಸಿದರು.




