ಮುಲ್ಕಿ: ಸಿ. ಎಸ್. ಐ. -ಕೆ.ಎಸ್.ಡಿ ದ.ಕ. ಪ್ರದೇಶ ಪರಿಷತ್ತು ಮತ್ತು ಹಳೆಯಂಗಡಿ ಪಿಎಸ್ಐ ಅಮ್ಮನ್ ಮೆಮೋರಿಯಲ್ ಚರ್ಚ್ ವತಿಯಿಂದ ಜಾಗತಿಕ ಭಾನುವಾರ ಶಾಲಾ ದಿನಾಚರಣೆ 2023 ರ ಅಂಗವಾಗಿ ಮಕ್ಕಳ ಹಬ್ಬ ಕಾರ್ಯಕ್ರಮ ಚರ್ಚ್ ಬಳಿ ನಡೆಯಿತು.

ಸಿ. ಎಸ್. ಐ. ಕರ್ನಾಟಕ ದಕ್ಷಿಣ ಸಭಾ ಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ರೈಟ್. ರೆವೆ. ಡಾ.ಸಿ.ಎಲ್ .ಪುರ್ತಾದೋ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಕ್ಕಳ ಭವ್ಯ ಮೆರವಣಿಗೆ ಮೂಲಕ ಚರ್ಚ್ ಗೆ ಆಗಮಿಸಿ ಬಲೂನು ಹಾರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಸಭಾ ಪಾಲಕ ಅಮೃತ್ ರಾಜ್ ಖೋಡೆ, ರೆ.ಫಾ. ಸಂಧ್ಯಾ ಸುಪ್ರೀತಾ, ಡಾ.ಎಬಿನೇ,ಟರ್ ಜತ್ತನ್ನ, ವಿನಯ್ ಲಾಲ್ ಬಂಗೇರ, ದ.ಕ. ಪ್ರದೇಶ ಪರಿಷತ್ ಅಧ್ಯಕ್ಷ ವಿಲಿಯಂ ಕುಂದರ್, ಉಪಾಧ್ಯಕ್ಷ ಗ್ಯಾಬ್ರಿಯಲ್ ರೋನಿತ್, ಕಾರ್ಯದರ್ಶಿ ಲಾವಣ್ಯ ಕೋಟ್ಯಾನ್, ಶರ್ಲಿ ಬಂಗೇರ, ಆಸ್ಟಿನ್ ಕರ್ಕಡ, ಎಚ್. ವಸಂತ್ ಬೆರ್ನಾಡ್, ಜೇಮ್ಸ್ ಕರ್ಕಡ , ಸಿಡ್ನಿ ಕರ್ಕಡ, ಜಯಾವಂತಿ ಪೌಲ್, ಕೌಶಿಕ್ ಅಮ್ಮನ್ನ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಮಕ್ಕಳ ಹಬ್ಬ ಕಾರ್ಯಕ್ರಮ ನಡೆಯಿತು.



