ಮುಲ್ಕಿ: ಸಿ ಎಸ್ ಐ -ಕೆ.ಎಸ್.ಡಿ ದ.ಕ. ಪ್ರದೇಶ ಪರಿಷತ್ತು ಮತ್ತು ಹಳೆಯಂಗಡಿ ಪಿಎಸ್ಐ ಅಮ್ಮನ್ ಮೆಮೋರಿಯಲ್ ಚರ್ಚ್ ವತಿಯಿಂದ ಜಾಗತಿಕ ಭಾನುವಾರ ಶಾಲಾ ದಿನಾಚರಣೆ 2023 ರ ಅಂಗವಾಗಿ ಮಕ್ಕಳ ಹಬ್ಬ ಕಾರ್ಯಕ್ರಮ ಚರ್ಚ್ ಬಳಿ ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ದ.ಕ. ಪ್ರಾದೇಶಿಕ ಪರಿಷತ್ ಅಧ್ಯಕ್ಷ ವಿಲಿಯಂ ಕುಂದರ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ.ರೈ, ಮಾತನಾಡಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಮಕ್ಕಳ ಹಬ್ಬ ಸೂಕ್ತ ವೇದಿಕೆಯಾಗಿದೆ, ಜೀವನದಲ್ಲಿ ತಂದೆ ತಾಯಿಗಳಿಗೆ ವಿಧೇಯರಾಗಿ,ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿದರೆ ಜೀವನದಲ್ಲಿ ಸಾಧಕರಾಗಲು ಸಾಧ್ಯ ಎಂದರು.


ಸಿ ಎಸ್ ಐ-ಕೆ ಎಸ್ ಡಿ ಯ ಉಪಾಧ್ಯಕ್ಷ ವಿಲಿಯಂ ಕೇರಿ, ಖಜಾಂಚಿ ವಿನ್ಸೆಂಟ್ ಪಾಲನ್ನ, ಜಾರ್ಜ್ ಎ. ಬೆರ್ನಾಡ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಜಾಯ್ಸ್ ವಿನಯ ಬಂಗೇರ, ಸಭಾ ಪಾಲಕ ಅಮೃತ್ ರಾಜ್ ಖೋಡೆ, ರೆ.ಫಾ. ಸಂಧ್ಯಾ ಸುಪ್ರೀತಾ, ಡಾ.ಎಬಿನೇಟರ್ ಜತ್ತನ್ನ, ವಿನಯ್ ಲಾಲ್ ಬಂಗೇರ,ಉಪಾಧ್ಯಕ್ಷ ಗ್ಯಾಬ್ರಿಯಲ್ ರೋನಿತ್ , ಕಾರ್ಯದರ್ಶಿ ಲಾವಣ್ಯ ಕೋಟ್ಯಾನ್, ಶರ್ಲಿ ಬಂಗೇರ, ಆಸ್ಟಿನ್ ಕರ್ಕಡ, ಎಚ್ ವಸಂತ್ ಬೆರ್ನಾಡ್, ಜೇಮ್ಸ್ ಕರ್ಕಡ , ಸಿಡ್ನಿ ಕರ್ಕಡ, ಜಯಾವಂತಿ ಪೌಲ್, ಕೌಶಿಕ್ ಅಮ್ಮನ್ನ ಶರ್ಲಿ ಬೆರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.ಬಳಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.



