ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆ ಕಲ್ಲಡ್ಕ ವಲಯ ಇದರ ಆಶ್ರಯದಲ್ಲಿ ಮನೆಯ ಶುಭ ಸಮಾರಂಭಗಳಲ್ಲಿ ದುಶ್ಚಟ ಮುಕ್ತ ಕಾರ್ಯಕ್ರಮ ಅಭಿಯಾನ ಅಂಗವಾಗಿ ಕಲ್ಲಡ್ಕ ಕುಧ್ರೆಬೆಟ್ಟು ಏಳ್ತಿಮಾರು ಮಧುಚಂದ್ರ ಇವರ ಮನೆಗೆ ತೆರಲಿ ತಮ್ಮ ಮನೆಯಲ್ಲಿ ನಿಗದಿಯಾದ ಮದುವೆಯ ಶುಭ ಕಾರ್ಯದಲ್ಲಿ ಮಧ್ಯಪಾನ ಮುಂತಾದ ದುಶ್ಚಟ ಕಾರ್ಯವನ್ನು ಮಾಡದಂತೆ ಶ್ರೀ ಮಣಿಕಂಠ ಯುವಶಕ್ತಿಯ ಅಧ್ಯಕ್ಷರಾದ ಲೋಕಾನಂದ ಏಳ್ತಿಮಾರು ಇವರ ಮೂಲಕ ವಿಜ್ಞಾಪನ ಪತ್ರವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಧ್ಯಪಾನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ವಿದ್ಯಾ, ಒಕ್ಕೂಟದ ಕಾರ್ಯದರ್ಶಿ ಸಂತೋಷ್ ಕುಮಾರ್ ಬೊಲ್ಪೊಡಿ ಉಪಸ್ಥಿತರಿದ್ದರು.



